• Slide
    Slide
    Slide
    previous arrow
    next arrow
  • ಬಿಜೆಪಿ ಅಭಿವೃದ್ಧಿ ಪೂರಕ ಕಾರ್ಯಗಳನ್ನು ಕೈಗೊಳ್ಳುತ್ತಿದೆ: ಶ್ಯಾಮರಾಜ್

    300x250 AD

    ಭಟ್ಕಳ: ಬಿಜೆಪಿ ಎನ್ನುವುದು ಸಮಾಜದ ಅಂತಿಮ ವರ್ಗದ ಅಂತಿಮ ವ್ಯಕ್ತಿಯ ತನಕ ಸಿಗಬೇಕಾದ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ಮಾಡುತ್ತಿರುವ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದ್ದು, ಪ್ರಧಾನಿ ಮೋದಿಯವರ 8 ವರ್ಷದ ಆಡಳಿತ ಅವಧಿಯಲ್ಲಿ ದೇಶವೂ ಅತ್ಯುನ್ನತ ಹಂತಕ್ಕೆ ತಲುಪುವುದರೊಂದಿಗೆ ವಿಕಾಸಕ್ಕೆ ಬೇರೆಯದ್ದೇ ಭಾಷ್ಯ ಬರೆದಿದ್ದಾರೆ ಎಂದು ಕೇರಳ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್ ಹೇಳಿದರು.
    ಅವರು ಮಂಗಳವಾರದOದು ಎರಡು ದಿನಗಳ ಕಾಲ ಭಟ್ಕಳ ಮಂಡಲದ ವಿವಿಧ ಭಾಗಗಳಲ್ಲಿ ಚುನಾವಣೆ ಪ್ರಚಾರದ ನಿಮಿತ್ತ ಭಟ್ಕಳಕ್ಕೆ ಆಗಮಿಸಿ ಮಂಡಲದ ಕಾರ್ಯಾಲಯದಲ್ಲಿ ಮಾತನಾಡಿದರು.
    ಕಳೆದ 8 ವರ್ಷದಿಂದ ಪ್ರಧಾನಿ ಮೋದಿ ಅವರು ಪ್ರಧಾನಮಂತ್ರಿಯ ಅವಧಿಯಲ್ಲಿ ದೇಶವನ್ನು ಜಗತ್ತಿನಲ್ಲಿಯೇ ಬೇರೆಯದ್ದೇ ಭಾಷ್ಯಕ್ಕೆ ಕೊಂಡೊಯ್ದಿದ್ದಾರೆ. ಕಾರಣ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಜನರ ಆರೋಗ್ಯ ರಕ್ಷಣೆ ಹಾಗೂ ಶಿಕ್ಷಣದ ಕ್ಷೇತ್ರದ ಜೊತೆಗೆ ಉಳಿದೆಲ್ಲ ಕ್ಷೇತ್ರದಲ್ಲಿ ದೇಶವು ಅತ್ಯುನ್ನತವಾಗಿ ಬೆಳೆದು ನಿಂತಿದೆ. ಈ ದೇಶದ ಯುವಕರಿಗೆ ನೀವು ಕೆಲಸ ಹುಡುಕುವ ಬದಲು ಕೆಲಸ ನೀಡುವ ಸ್ಥಾನದಲ್ಲಿ ನಿಂತು ಉದ್ಯಮ ಆರಂಭಿಸುವತ್ತ ಚಿತ್ತ ಹರಿಸಿ ಎಂದು ಕಿವಿಮಾತು ಹೇಳಿದಂತೆ ಕೇಂದ್ರ ಸರಕಾರ ಯುವಕರ ಉದ್ಯೋಗ ಸಬಲೀಕರಣಕ್ಕಾಗಿ ಮುದ್ರಾ ಯೋಜನೆ ಜಾರಿ ತಂದು ಸದ್ಯ ದೇಶದಲ್ಲಿ ಒಟ್ಟು 41 ಕೋಟಿ ಸಾಲವನ್ನು ನೀಡಲಾಗಿದೆ ಎಂದರು.
    ಬಿಜೆಪಿ ಶಿವಮೊಗ್ಗ ವಿಭಾಗದ ಸಹ ಪ್ರಬಾರಿ ಎನ್.ಎಸ್.ಹೆಗಡೆ ಮಾತನಾಡಿ, ಈ ಬಾರಿ ಚುನಾವಣೆಯನ್ನು ಯಶಸ್ವಿಯಾಗಿ ಮಾಡಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನವನ್ನು ಗೆದ್ದು ಮತ್ತೆ ಸರಕಾರ ರಚಿಸಬೇಕೆಂಬ ಉದ್ದೇಶದೊಂದಿಗೆ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಉತ್ತಮ ರಾಜಕೀಯ ವಾತಾವರಣ ಸ್ರಷ್ಟಿಗೆ ವಿಜಯ ಸಂಕಲ್ಪ ಯಾತ್ರೆಯನ್ನು ಸಹ ರಾಜ್ಯಾದ್ಯಂತ ನಡೆಸಲಾಗಿತ್ತು. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಬೇರೆ ಬೇರೆ ರಾಜ್ಯದ ಶಾಸಕರು, ಮಂತ್ರಿಗಳು, ಕೇಂದ್ರದ ಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ. ಇಂದಿನಿಂದ ಪ್ರತಿ ಮನೆ ಮನೆ ಪ್ರಚಾರ ಕಾರ್ಯವು ಚಾಲನೆಗೊಳ್ಳಲಿದೆ. ಏಪ್ರಿಲ್ 27ರಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರು ಪ್ರಚಾರ ಕಾರ್ಯ ನಡೆಸಲಿದ್ದು, ಮೇ 3ರಂದು ನಿಗದಿತ ನೌಕಾನೆಲೆಯ ಜಾಗದಲ್ಲಿ ಜಿಲ್ಲೆಯ ಮಧ್ಯ ಭಾಗ ಅಂಕೋಲಾದಲ್ಲಿ ಪ್ರಚಾರದ ಸಮಾವೇಶ ನಡೆಸಲಿದ್ದಾರೆ ಎಂದು ತಿಳಿಸಿದರು.

    ಬಿಜೆಪಿ ಭಟ್ಕಳ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, 5 ವರ್ಷದ ಅವಧಿಯಲ್ಲಿ ಶಾಸಕರಾಗಿ ಸುನೀಲ ನಾಯ್ಕ ಅವರು ಜನಪರ ಕಾರ್ಯಕ್ರಮದ ಜೊತೆಗೆ ಸರಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮತ್ತು ವೈಯಕ್ತಿಕ ಧನ ಸಹಾಯವನ್ನು ಮಾಡಿದ್ದಾರೆ. ಒಟ್ಟು 1200 ಕೋಟಿ ಅನುದಾನವನ್ನು ಸರಕಾರ ಮಟ್ಟದಿಂದ ತಂದು ಸಮರ್ಪಕವಾದ ಯೋಜನೆಗೆ ಅನುಷ್ಠಾನಗೊಳಿಸಿದ್ದಾರೆ. ಬಹುಮುಖ್ಯವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶಾಂತಿಯುತವಾಗಿ ಸಂಭ್ರಮದಿ0ದ ರಾಜಾಂಗಣ ನಾಗಬನದ ಪುನರ್ ಪ್ರತಿಷ್ಠಾಪನೆ ಮಾಡಿರುವುದು, ಕೇವಲ ಮೂರು ದಿನದಲ್ಲಿ ಪುರಸಭೆಯಿಂದ ಹಾಕಲಾದ ಅನಧಿಕೃತ ಉರ್ದು ಭಾಷೆಯ ಬೋರ್ಡ್ ತೆರವು ಮಾಡಿಸಿದ್ದಾರೆ. ಇನ್ನು ಕ್ಷೇತ್ರದ ಬಹುತೇಕ ದೇವಸ್ಥಾನಗಳಿಗೆ ವೈಯಕ್ತಿಕ ಹಣದಲ್ಲಿ ಮಹಾದ್ವಾರ ಹಾಗು 40 ಆಟೋ ರಿಕ್ಷಾ ನಿಲ್ದಾಣಗಳನ್ನು ನಿರ್ಮಿಸಿಕೊಟ್ಟಿದ್ದಾರೆ. 5 ವರ್ಷದಲ್ಲಿ ಕಾರ್ಮಿಕ ಇಲಾಖೆಯಿಂದ ಒಂದು ಲಕ್ಷದ ಐವತ್ತು ಸಾವಿರ ಕಾರ್ಮಿಕರಿಗೆ ಕಿಟ್ ವಿತರಿಸಲಾಗಿದೆ. ಉಜ್ವಲ ಗ್ಯಾಸ್ ಯೋಜನೆಯಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ 13545 ಫಲಾನುಭವಿಗಳಿಗೆ ಲಭಿಸಿದೆ. ಇನ್ನು ಕ್ಷೇತ್ರದಲ್ಲಿ 30 ಸಾವಿರಕ್ಕೂ ಅಧಿಕ ಕಿಸಾನ್ ಸಮ್ಮಾನ ಯೋಜನೆ ಫಲಾನುಭವಿಗಳಿದ್ದಾರೆ ಎಂದರು.

    300x250 AD

    ಭಟ್ಕಳ ಆಟೋ ರಿಕ್ಷಾ ಚಾಲಕರ ಸಂಘಕ್ಕೆ ಜಾಗ ಮಂಜೂರು ವಿಚಾರದಲ್ಲಿ ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದವರು ಆರೋಪಿಸುತ್ತಿದ್ದು, ಯಾವುದೇ ಪೂರಕ ದಾಖಲೆ ಪಡೆಯದೇ ಕ್ಯಾಬಿನೆಟ್ ನಲ್ಲಿ ಜಾಗ ಮಂಜೂರಾತಿ ವಿಚಾರ ಮುಂದುವರೆಯುದಿಲ್ಲ. ಸರಕಾರದಿಂದ ಮಂಜೂರಾದ ಪ್ರತಿ ನಮ್ಮ ಬಳಿಯಿದೆ ಎಂದ ಅವರು ಸರಕಾರಕ್ಕೆ ಆಟೋ ರಿಕ್ಷಾ ಚಾಲಕರ ಸಂಘವು ತುಂಬಬೇಕಾದ ಅಗತ್ಯ ಹಣ ತುಂಬಿದ ಬಳಿಕ ಜಾಗದ ಮುಂದಿನ ಕ್ರಮ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ನೀಡುತ್ತಿರುವ ಗ್ಯಾರೆಂಟಿ ಕಾರ್ಡ ಸಂಪೂರ್ಣವಾಗಿ ಬೊಗಸ ಕಾರ್ಡ ಆಗಿದೆ. ಈ ಹಿನ್ನೆಲೆ ಕೆಲವು ಕಡೆ ಮಹಿಳೆಯರಿಂದ ಆಧಾರ ಕಾರ್ಡ ಪಡೆದು ಸಹಿ ಪಡೆದುಕೊಳ್ಳುವ ಕೆಲಸದಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸನಿOದ ಆಗುತ್ತಿದೆ ಎಂದರು.
    ಈ ಸಂದರ್ಭದಲ್ಲಿ ಭಟ್ಕಳ ಚುನಾವಣಾ ಉಸ್ತುವಾರಿ ಕಿಶೋರ ಕುಮಾರ ಕುಂದಾಪುರ, ಉತ್ತರ ಕನ್ನಡ ಜಿಲ್ಲಾ ಸಹ ಪ್ರಭಾರಿ ಪ್ರಸ್ನದ ಕೆರೆಕೈ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಭಟ್ಕಳ ಮಂಡಲ ಪ್ರಭಾರಿ ಪ್ರಶಾಂತ ನಾಯ್ಕ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮುಂತಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top