ಭಟ್ಕಳ: ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಮತದಾನದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮದಡಿ ನೇತ್ರಾಣಿ ನಡುಗುಡ್ಡೆಯಲ್ಲಿ ನಡೆಸಿ ಗಮನ ಸೆಳೆಯಲಾಯಿತು.
ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಮಾವಳ್ಳಿ-1 ಹಾಗೂ ಮಾವಳ್ಳಿ-2 ಗ್ರಾಮ ಪಂಚಾಯತ ಮತ್ತು ಸ್ಕೂಬಾ ಡೈವಿಂಗ್ ಅಡ್ವೆಂಚರ್ ಕ್ಲಬ್‌ರವರ ಸಹಯೋಗದಲ್ಲಿ ಮುರುಡೇಶ್ವರ ಕಡಲ ಕಿನಾರೆಯಲ್ಲಿ ಕಾರ್ಯಕ್ರಮ ಆರಂಭಗೊOಡಿತು. ಸ್ಥಳೀಯರು ಮತ್ತು ಕಛೇರಿ ಸಿಬ್ಬಂದಿಗಳೊOದಿಗೆ ನೇತ್ರಾಣಿ ನಡುಗುಡ್ಡೆಗೆ ತೆರಳಿ, ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಲ್ಲಿನ ಅಮೂಲ್ಯ, ಅಪರೂಪದ ಹವಳ, ಜಲ-ಚರಗಳ ನಡುವೆ ಜಾಗೃತಿ ಭಿತ್ತಿ ಪತ್ರ ಪ್ರದರ್ಶಿಸಿ ಗಮನ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನ್ಮನೆ, ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಗ್ರಾಮ ಪಂಚಾಯತ ಕಾರ್ಯದರ್ಶಿ ಮಾರುತಿ ದೇವಾಡಿಗ ಹಾಗೂ ಸಿಬ್ಬಂದಿಗಳು, ಸ್ಕೂಬಾ ಡೈವಿಂಗ್ ಅಡ್ವೆಂಚರ್ ಕ್ಲಬ್ ಸಿಬ್ಬಂದಿಗಳು ಹಾಜರಿದ್ದರು.