• Slide
  Slide
  Slide
  previous arrow
  next arrow
 • ಪೋಕ್ಸೋ ಆರೋಪಿಗೆ 20 ವರ್ಷ ಜೈಲು

  300x250 AD

  ಯಲ್ಲಾಪುರ: 2019ರಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ್‌ಕುಮಾರ್ ಆರೋಪಿತನಿಗೆ 20 ವರ್ಷಗಳ ಶಿಕ್ಷೆ ಹಾಗೂ 1ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
  ಪಟ್ಟಣದ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂಬ ದೂರು 2019ರಲ್ಲಿ ಯಲ್ಲಾಪುರ ಠಾಣೆಯಲ್ಲಿ ದಾಖಲಾಗಿತ್ತು. ದೂರನ್ನಾಧರಿಸಿ ತನಿಖೆ ಕೈಗೊಂಡ ಅಂದಿನ ಪಿಐ ಮಂಜುನಾಥ ನಾಯ್ಕ ಆರೋಪಿಯನ್ನು ಬಂಧಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಯುತ್ತಿರುವಂತೆಯೇ ಹೆಚ್ಚುವರಿ ದೋಷಾರೋಪಣ ಪಟ್ಟಿಯನ್ನು ಮತ್ತೊಮ್ಮೆ ಪಿಐ ಸುರೇಶ್ ಯಳ್ಳೂರು ಸಲ್ಲಿಸಿದ್ದರು.
  ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ಮುಂಬೈ ಮೂಲದ ಅಸ್ಲಂ ಇಸಾಕ್ ತಂಬೊಳಿ ಎಂಬಾತನಿಗೆ 20ವರ್ಷ ಜೈಲು ಹಾಗೂ 1ಲಕ್ಷ ದಂಡ ವಿಧಿಸಿದೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 4ಲಕ್ಷ ರೂ ಹಣವನ್ನು ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಮತ್ತು 1ಲಕ್ಷ ರೂ ದಂಡವನ್ನು ನೊಂದ ಬಾಲಕಿಗೆ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಿದೆ.
  ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಆರೋಪಿತರ ವಿರುದ್ಧ ಶುಭ ಆರ್ ಗಾಂವ್ಕರ್ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top