ಸಿದ್ದಾಪುರ: ತಾಲೂಕಿನ ತ್ಯಾರ್ಸಿ ಬಳಿ ಸಿದ್ದಾಪುರ- ಕುಮಟಾ ರಾಜ್ಯ ಹೆದ್ದಾರಿ ಏಕಾಏಕಿ ಕುಸಿದಿದ್ದು, ಲೋಕೋಪಯೋಗಿ ಇಲಾಖೆಯವರು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ತ್ಯಾರ್ಸಿ ಸಮೀಪ ಮಂಗಳವಾರ ಬೆಳಿಗ್ಗೆ ರಸ್ತೆ ಮಧ್ಯೆ ಕುಸಿದು ಸುರಂಗವಾಗಿ ಮಾರ್ಪಟ್ಟಿತ್ತು. ಸ್ಥಳೀಯ ಯುವಕರು ಹೊಂಡಕ್ಕೆ ಕಲ್ಲು ಮುಚ್ಚಿ ಎರಡು ಬದಿಗೆ ವಾಹನ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಕುಸಿದ ಹೊಂಡವನ್ನು ತುಂಬಿ ಹೆದ್ದಾರಿ ಸರಿಪಡಿಸಿದ್ದಾರೆ. ರಸ್ತೆ ದಿಢೀರ್ ಕುಸಿತಕ್ಕೆ ಕಾರಣ ಏನೆಂಬುದು ಮಾತ್ರ ತಿಳಿದಿಲ್ಲ.
ರಾಜ್ಯ ಹೆದ್ದಾರಿ ಏಕಾಏಕಿ ಕುಸಿತ
