ಅಂಕೋಲಾ: ಕ್ಷೇತ್ರದ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಕೇಂದ್ರ ಸಚಿವರಾದ ಶ್ರೀಪಾದ ನಾಯ್ಕ ತಾಲೂಕಿನ ಹಲವು ಭಾಗಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಯ ಪರ ಮತಯಾಚನೆ ಮಾಡಿದರು.
ನಂತರ ತಾಲೂಕಿನ ಶ್ರೀ ಮಹಮ್ಮಾಯಿ, ಶ್ರೀಕಾಳಮ್ಮ, ಶ್ರೀಶಾಂತಾದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಬಡಗೇರಿಯಲ್ಲಿರುವ ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಹಾಗೂ ಶಾಸಕಿ ರೂಪಾಲಿ ನಾಯ್ಕರಿಗೆ ಜನಪದ ಹಾಡು ಹೇಳಿ ಸ್ವಾಗತಿಸಿಕೊಂಡ ಸುಕ್ರಜ್ಜಿ ಶಾಸಕಿಗೆ ಹರಸುತ್ತ ಕಿವಿಯಲ್ಲಿ ತಮ್ಮ ಕೆಲವು ಆಸೆಗಳನ್ನು ಹೇಳಿಕೊಂಡರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಹಾಗೂ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಬಿಜೆಪಿ ವಕ್ತಾರ ನಾಗರಾಜ ನಾಯಕ ಹಾಗೂ ಬಿಜೆಪಿ ಪ್ರಮುಖರಾದ ಭಾಸ್ಕರ್ ನಾರ್ವೆಕರ್,ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ್, ಮಹಿಳಾ ಮೋರ್ಛಾ ಪ್ರಭಾರಿ ಅನುರಾಧಾ ನಾಯ್ಕ, ಪ್ರಮುಖರುಗಳಾದ ಆರತಿ ಗೌಡ ಸುಬ್ರಹ್ಮಣ್ಯ ರೇವಣಕರ್, ಬಿಂದೇಶ ಹಿಚ್ಕಡ, ಗಣಪತಿ ನಾಯ್ಕ, ಸೂರಜ ಎಂ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಅಭ್ಯರ್ಥಿ ರೂಪಾಲಿ ಪರ ಗೋವಾ ಸಚಿವರ ಮತ ಯಾಚನೆ
