• Slide
    Slide
    Slide
    previous arrow
    next arrow
  • ರಾಷ್ಟ್ರ ಮೊದಲು ಎಂಬ ಕಲ್ಪನೆಯಿರುವ ಬಿಜೆಪಿಗೆ ಮತದಾರರು ಬೆಂಬಲಿಸಿ: ಸುಖುಮ್ ಮಜೂಮ್ದಾರ್

    300x250 AD

    ಶಿರಸಿ : ಆರ್ಥಿಕ ಸಂಘರ್ಷ ಹಾಗೂ ವಿವೇಚನಾ ರಹಿತ ಯೋಜನೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ನಿಲುವುಗಳಿಂದಾಗಿ ರಾಷ್ಟ್ರದ ಸುರಕ್ಷತೆ ಅಪಾಯದಲ್ಲಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಖುಮ್ ಮಜೂಮ್ಧಾರ್ ಆರೋಪಿಸಿದರು.

    ನಗರ ಶಾಸಕರ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದ ಗಡಿಗಳಲ್ಲಿ ಗಡಿಭದ್ರೆತೆಗಾಗಿ ,ಸುರಕ್ಷತೆಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾವುದೇ ಸಹಕಾರ ನೀಡುತ್ತಿಲ್ಲ. ಬಾಂಗ್ಲಾದಿಂದ ಬರುವ ನುಸುಳುಕೋರರನ್ನೂ ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಬರುವವರೆಲ್ಲರೂ ಇಲ್ಲಿನ ನಾಗರೀಕರೆಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಹೀಗೆ ಬರುವವರಲ್ಲಿ ಉಗ್ರವಾದಿಗಳೂ ನುಸುಳಿ ಬರುವದು ವಿಶೇಷವಲ್ಲ ಎಂದು ಆರೋಪಿಸಿದರು.

    ಅಲ್ಲದೇ ಅಬಿವೃದ್ಧಿ ಶೂನ್ಯ ಯೋಜನೆಗಳಿಂದಾಗಿ ನಿರುದ್ಯೋಗದ ಸಮಸ್ಯೆ ವಿಪರೀತವಾಗಿದೆ. ದೇಶದ ಎಲ್ಲ ಭಾಗಗಳಿಗೂ ಉದ್ಯೋಗವನ್ನರಸಿ ಪಶ್ಚಿಮ ಬಂಗಾಲಿಗಳು ಹೋಗುತ್ತಿರುವದು ಸರ್ವೇ ಸಾಮಾನ್ಯ. ಇಂತಹ ವಲಸೆಗಾರರ ನಡುವೆ ನುಸುಳುಕೋರ ಉಗ್ರರೂ ಸೇರಿ ದೇಶದಾದ್ಯಂತ ಅಭದ್ರತೆಯನ್ನುಂಟು ಮಾಡುವ ಸಾಧ್ಯತೆಗಳಿವೆ. ಇದು ರಾಷ್ಟ್ರದ ಸುರಕ್ಷತೆಯ ಜೊತೆಗಿನ ಹುಡುಗಾಟವಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿಯ ನಿಲುವು ಇಡೀ ರಾಜ್ಯದ ಭದ್ರತೆಗೇ ಮಾರಕವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

    300x250 AD

    ಕರ್ನಾಟಕದ ಡಬಲ್ ಎಂಜಿನ್‌ ಸರಕಾರದ ಅಭಿವೃದ್ಧಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಮತ್ತು ವಿಕಾಸ ಏರುಗತಿಯಲ್ಲಿದೆ. ತನ್ನದೇ ಸಿದ್ದಾಂತ ಹೊಂದಿರುವ ಬಿಜೆಪಿ ಈ ಬಾರಿಯೂ ಕರ್ನಾಟಕದಲ್ಲಿ ಬಹುಮತ ಸಾಧಿಸಿ ಆಡಳಿತ ನಡೆಸುವ ವಿಶ್ವಾಸವಿದೆ ಎಂದ ಅವರು, ರಾಷ್ಟ್ರ ಮೊದಲು ಎನ್ನುವ ಕಲ್ಪನೆಯೊಂದಿಗೆ ಇರುವ ಪಕ್ಷ ಬಿಜೆಪಿಗೆ ಮತದಾರ ಬೆಂಬಲಿಸಲಿದ್ದಾರೆ. ಆದರೆ ಈ ಪಕ್ಷದಿಂದ ಹೊರಬಂದು ಏನೋ ಸಾಧಿಸುತ್ತೇನೆ ಎನ್ನುವುದು ಭ್ರಮೆ. ಉಮಾ ಭಾರತಿಯಂತವರು ಪ್ರಯತ್ನಿಸಿ ಯಶಸ್ಸನ್ನು ಪಡೆಯುವಲ್ಲಿ ಹಿಂದೆ ಬಿದ್ದಿರುವದನ್ನು ಕಾಣಬಹುದಾಗಿದೆ ಎಂದರು.

    ರಾಹುಲ್ ಗಾಂಧಿಯನ್ನೂ ಸೇರಿ ವಿಪಕ್ಷದ ನೇತಾರರು ಇಡಿ, ಸಿಬಿಐಗಳ ದುರುಪಯೋಗವಾಗುತ್ತಿದೆಯೆಂದು ಆರೋಪಿಸುತ್ತಿದ್ದಾರೆ. ಆದರೆ ತಮ್ಮ ತಮ್ಮ ಆಳ್ವಿಕೆಯ ಪ್ರದೇಶಗಳಲ್ಲಿ ಸಿಬಿಐ, ಇಡಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೊಗಳುತ್ತಿದ್ದಾರೆ. ಇವರು ಪರಸ್ಪರ ಆರೋಪ-ಪ್ರತ್ಯಾರೋಪದ ಗೊಂದಲಕ್ಕೆ ಬಿದ್ದು ತಮ್ಮನ್ನೇ ತಾವು ಕಳ್ಳರೆಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹ ವಿವಾದಾತ್ಮಕ ನಿಲುವಿನ ಬದಲು ಈ ನಾಯಕರು ಯಾವುದಾದರೂ ಖಚಿತ ನಿಲುವನ್ನು ವ್ಯಕ್ತಪಡಿಸಬೇಕಾದ ಅಗತ್ಯವಿದೆ ಎಂದರು.
    ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಬಾರಿ ದಾಖಲೆಯ ಮತಗಳಿಂದ ಗೆಲುವು ನಿಶ್ಚಿತವಾಗಿದ್ದು, ಎಲ್ಲೆಡೆ ಬಿಜೆಪಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಕ್ಷೇತ್ರದ ಮತದಾರು ಶೇ. 100 ರಷ್ಟು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಈ ಸಂದರ್ಭದಲ್ಲಿ ಗಣಪತಿ ನಾಯ್ಕ, ನಂದನ ಸಾಗರ್‌, ಉಷಾ ಹೆಗಡೆ ಇನ್ನಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top