• Slide
    Slide
    Slide
    previous arrow
    next arrow
  • ಗೋಕರ್ಣಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು; ಅಪಾಯಕಾರಿ ತಿರುವುಗಳ ದುರಸ್ಥಿಗೆ ಆಗ್ರಹ

    300x250 AD

    ಗೋಕರ್ಣ: ಬೇಸಿಗೆ ರಜೆ ಆರಂಭಗೊoಡಿರುವುದರಿoದ ಗೋಕರ್ಣದ ಬೀಚ್‌ಗಳಲ್ಲಿ ಹೆಚ್ಚಿನ ಜನಸಂಖ್ಯೆ ಕಂಡುಬರುತ್ತಿದೆ. ಆದರೆ ಇಲ್ಲಿಗೆ ಬಂದವರು ಕಡ್ಡಾಯವಾಗಿ ಓಂ ಬೀಚಿಗೆ ಆಗಮಿಸುತ್ತಾರೆ. ಆದರೆ ಇಲ್ಲಿಯ ರಸ್ತೆಯ ಕೆಲವು ತಿರುವುಗಳು ಅತ್ಯಂತ ಅಪಾಯಕಾರಿಯಾಗಿದ್ದು, ಆಗಾಗ ಚಿಕ್ಕಪುಟ್ಟ ಅಪಘಾತಗಳು ನಡೆಯುತ್ತಿರುತ್ತವೆ.

    ಪ್ರತಿದಿನ ಇಲ್ಲಿಗೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಬಸ್, ಕಾರು, ರಿಕ್ಷಾ, ಬೈಕ್ ಮೂಲಕ ಆಗಮಿಸುತ್ತಾರೆ. ಆದರೆ ಅಲ್ಲಲ್ಲಿ ಕಂಡುಬರುವ ಅಪಾಯಕಾರಿ ತಿರುವುಗಳು ಪ್ರವಾಸಿಗರನ್ನು ಬೆಚ್ಚಿ ಬೀಳಿಸುತ್ತವೆ. ಹೀಗಾಗಿ ಸಂಬ0ಧಪಟ್ಟ ಇಲಾಖೆಯವರ ಬಳಿ ಹಲವು ಬಾರಿ ವಿನಂತಿಸಿದ್ದರೂ ಅತ್ಯುತ್ತಮ ರಸ್ತೆ ಹಾಗೂ ತಿರುವು ಸರಿಪಡಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಪ್ರವಾಸಿಗರು ಪ್ರತಿನಿತ್ಯ ಕಿರಿ ಕಿರಿ ಅನುಭವಿಸುತ್ತಿದ್ದಾರೆ.

    300x250 AD

    ಗೋಕರ್ಣ ಕೇವಲ ಪ್ರವಾಸ ತಾಣವಲ್ಲದೇ ಧಾರ್ಮಿಕ ತಾಣವಾಗಿರುವುದರಿಂದ ಅತಿಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಧಾರ್ಮಿಕ ಕ್ಷೇತ್ರಕ್ಕೆ ಬಂದ ಭಕ್ತರು ಕೂಡ ಸುತ್ತಮುತ್ತಲಿನ ಬೀಚ್‌ಗಳಿಗೆ ಬೇಟಿ ನೀಡಿ ತೆರಳುತ್ತಾರೆ. ಆದರೆ ತೆರಳುವ ರಸ್ತೆ ತೀರಾ ಅಪಾಯಕಾರಿ ಆಗಿರುವದರಿಂದ ಸಹಜವಾಗಿಯೇ ಅವರಲ್ಲಿಯೂ ಭಯ ಉಂಟಾಗುವ0ತಾಗಿದೆ. ಸಂಬ0ಧಪಟ್ಟ ಇಲಾಖೆಯವರು ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top