• Slide
  Slide
  Slide
  previous arrow
  next arrow
 • ಕಾಂಗ್ರೆಸ್ ಪಕ್ಷ ಸೇರಿದ 25ಕ್ಕೂ ಅಧಿಕ ಯುವಕರು

  300x250 AD

  ಶಿರಸಿ: ಶಿರಸಿ -ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ನೇತೃತ್ವದಲ್ಲಿ 25 ಕ್ಕೂ ಅಧಿಕ ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರಿದರು.‌

  ನಗರದ ಯಲ್ಲಾಪುರ ರಸ್ತೆಯಲ್ಲಿರುವ ಕಾಂಗ್ರೆಸ್ ಚುನಾವಣಾ ಕಾರ್ಯಾಲಯದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತವನ್ನು ಒಪ್ಪಿಕೊಂಡು ಯುವಕರು ಪಕ್ಷ ಸೇರಿದರು. ಭೀಮಣ್ಣ ನಾಯ್ಕ ಯುವಕರಿಗೆ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು

  ನಂತರ ಮಾತನಾಡಿದ ಭೀಮಣ್ಣ, ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿಯ ದುರಾಡಳಿತವನ್ನು ಖಂಡಿಸಿ ಇಂದು ಯುವಕರೂ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ.‌ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅತ್ಯುತ್ತಮ ಆಡಳಿತ ನೀಡಿ, ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದನ್ನು ಮುಂದೆಯೂ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮುಂದುವರೆಸಲಾಗುತ್ತದೆ. ಕಾರಣ ಈ ಬಾರಿ ಎಲ್ಲರೂ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದರು.

  300x250 AD

  ಈ ವೇಳೆ ಪ್ರಮುಖರಾದ ಜಗದೀಶ ಗೌಡ,, ಅಶ್ವಿನ್ ನಾಯ್ಕ, ಪ್ರದೀಪ ಶೆಟ್ಟಿ, ಗಾಯತ್ರಿ ನೇತ್ರೇಕರ ಮುಂತಾದವರು ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top