• Slide
    Slide
    Slide
    previous arrow
    next arrow
  • ವಿಜೃಂಭಣೆಯಿಂದ ನಡೆದ ಅಮದಳ್ಳಿ ಶ್ರೀವೀರಗಣಪತಿ ದೇವರ ವಾರ್ಷಿಕೋತ್ಸವ

    300x250 AD

    ಕಾರವಾರ: ತಾಲೂಕಿನ ಅಮದಳ್ಳಿಯ ಶ್ರೀ ವೀರಗಣಪತಿ ದೇವರ 39ನೇ ವಾರ್ಷಿಕೋತ್ಸವ ಶನಿವಾರ ವಿಜೃಂಭಣೆಯಿಂದ ನಡೆದಿದ್ದು ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರಕೃಪೆಗೆ ಪಾತ್ರರಾದರು.
    ಮುಂಜಾನೆಯಿಂದ ಮಹಾ ಮಂಗಳಾರತಿ, ಸಮೂಹಿಕ ಹಾಗೂ ದೇವಸ್ಥಾನದ ವತಿಯಿಂದ 108 ತೆಂಗಿನಕಾಯಿ ಗಣಹೋಮ ಮತ್ತು ಪೂರ್ಣಾಹುತಿ, ಮಧ್ಯಾಹ್ನ 12 ಗಂಟೆಯಿ0ದ 2 ಗಂಟೆವರೆಗೆ ಅಭಿಷೇಕ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು. 2 ರಿಂದ ಸಂಜೆಯವರೆಗೂಇಚ್ಚಿತ್ ಗುರುದಾಸ ತಳಾವಳಿಕರ ಮಡಗಾಂವ ಗೋವಾ ಇವರು ಆಯೋಜಿಸಿದ್ದ 17 ನೇ ವರ್ಷದ ಅನ್ನಸಂತರ್ಪಣೆಯಲ್ಲಿ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
    ಬಳಿಕ ಸಂಜೆ 7.30 ರಿಂದ 8.30ರವರೆಗೆ ರಂಗಪೂಜೆ ಹಾಗೂ ದೀಪೋತ್ಸವ ಜರುಗಿತು. ವಿವಿಧ ಗಣ್ಯ ವ್ಯಕ್ತಿಗಳು ಸೇರಿದಂತೆ ಸಾಗರೋಪಾದಿಯಲ್ಲಿ ಬಂದ ಭಕ್ತರಿಗೆ ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸ್ವಯಂ ಸೇವಕರು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಭಕ್ತರಿಗೆ ಸಮಸ್ಯೆ ಉಂಟಾಗದAತೆ ಸಹಕರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top