Slide
Slide
Slide
previous arrow
next arrow

ಅಭಿವೃದ್ಧಿಯಲ್ಲಿ ಸಿದ್ದಾಪುರವನ್ನು ಕಡೆಗಣಿಸದೇ ಸಾಕಷ್ಟು ಅನುದಾನಗಳನ್ನು ತರಲಾಗಿದೆ: ಕಾಗೇರಿ

300x250 AD

ಸಿದ್ದಾಪುರ: ಅಭಿವೃದ್ಧಿಯಲ್ಲಿ ತಾಲೂಕನ್ನು ಯಾವತ್ತಿಗೂ ಕಡೆಗಣಿಸಿಲ್ಲ ಬದಲಾಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಹಾಗೂ ಪ್ರತಿ ಗ್ರಾಮ ಪಂಚಾಯತಗಳಿಗೂ ಸಾಕಷ್ಟು ಅನುದಾನ ತಂದು ರಸ್ತೆ, ಸೇತುವೆ, ಕಾಲುಸಂಕ ಸೇರಿದಂತೆ ಹತ್ತು ಹಲವಾರು ಕಾಮಗಾರಿಗಳನ್ನು ಈಗಾಗಲೇ ಮಾಡಲಾಗಿದೆ ಎಂದು ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಶನಿವಾರ ತಾಲೂಕಿನ ತ್ಯಾಗಲಿ, ವಾಜಗೋಡ, ಹಲಗೇರಿ, ಕೊರ್ಲಕೈ, ಮನಮನೆ, ಕವಂಚೂರು ಹಾಗೂ ಸಿದ್ದಾಪುರ ಪಟ್ಟಣದ ವಾಪ್ತಿಯಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದರು. ಸಿದ್ದಾಪುರ ತಾಲೂಕು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.

ಇಂದು ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ಸಾಮಾನ್ಯ ಜನರಿಗೆ ಬಿಜೆಪಿ ಸರ್ಕಾರದ ಫಲ ಸಿಗುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದು ಅವರು ಹೇಳಿದರು. ಈ ವೇಳೆ ವಿವಿಧ ಪಕ್ಷಗಳ ಪ್ರಮುಖರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

300x250 AD

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ಪ್ರಮುಖರಾದ ತಿಮ್ಮಪ್ಪ ಮಡಿವಾಳ, ಈಶ್ವರ್ ನಾಯ್ಕ, ನಾಗರಾಜ್ ಆರ್. ನಾಯ್ಕ, ಕೆ.ಆರ್. ವಿನಾಯಕ, ಗುರುರಾಜ್ ಶಾನಭಾಗ್, ನಂದನ್ ಬೋರ್ಕರ್, ವಿಜಯ್ ಹೆಗಡೆ, ಸುರೇಶ್ ನಾಯ್ಕ ಬಾಲಿಕೊಪ್ಪ, ಮಂಗಲಾ ಅಣ್ಣಪ್ಪ ಗೌಡ, ಚಂದ್ರಕಲಾ ಶ್ರೀಧರ ನಾಯ್ಕ, ಸುಮನಾ ಕಾಮತ್, ನಾರಾಯಣ್ ಗೌಡ, ಮಂಜುನಾಥ್ ಭಟ್, ನಾಗರಾಜ್ ಅಂಬಿಗ, ಕೃಷ್ಣಮೂರ್ತಿ ನಾಯ್ಕ, ವಿಜೇತ್ ಗೌಡರ, ಶ್ರೀನಿವಾಸ್ ಹೆಗ್ಗೇಕೊಪ್ಪ, ಅಣ್ಣಪ್ಪ ನಾಯ್ಕ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.

Share This
300x250 AD
300x250 AD
300x250 AD
Back to top