• Slide
    Slide
    Slide
    previous arrow
    next arrow
  • ವಿಜೃಂಭಣೆಯಿಂದ ನೆರವೇರಿದ ಸೋಮಸಾಗರ ರಥೋತ್ಸವ

    300x250 AD

    ಶಿರಸಿ: ತಾಲೂಕಿನ ಶಕ್ತಿಪೀಠಗಳಲ್ಲೊಂದಾದ ಸೋಮಸಾಗರದ ಶ್ರೀ ಸೋಮೇಶ್ವರ ದೇವರ ರಥೋತ್ಸವವು ಶ್ರೀ ದೇವಾಲಯದ ರಥಬೀದಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಶ್ರೀದೇವರಿಗೆ ಎಲ್ಲ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರದಲ್ಲಿ ಕರೂರು ಸೀಮಾ ಭಾಗದ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಗ್ರಾಮಸ್ಥರೆಲ್ಲರೂ ಜೊತೆಗೂಡಿ ಸೋಮೇಶ್ವರ ದೇವರ ರಥವನ್ನು ಭಕ್ತಿಯಿಂದ ಎಳೆಯುವುದರ ಮೂಲಕ ತೇರು ಸಾಂಗವಾಗಿ ಸಾಗಿತು.

    300x250 AD

    ಸುತ್ತಮುತ್ತಲಿನ ಅನೇಕ ಊರುಗಳಿಂದ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀದೇವರ ದರ್ಶನ ಪಡೆದು ಪುನೀತರಾದರು. ಈ ವೇಳೆ ವೈದಿಕರು, ದೇವಸ್ಥಾನದ ಮೊಕ್ತೇಸರರಾದ ಮಹೇಂದ್ರ ಹೆಗಡೆ ಮುಳಖಂಡ, ಶ್ರೀ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಗ್ರಾಮದ ಹಿರಿಯರು ಸೇರಿದಂತೆ ಇನ್ನಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top