Slide
Slide
Slide
previous arrow
next arrow

ಅಂಕೋಲಾ ಸರ್ಕಾರಿ ಕಾಲೇಜಿಗೆ 90% ಫಲಿತಾಂಶ

300x250 AD

ಅಂಕೋಲಾ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಈ ವರ್ಷದ ದ್ವಿತೀಯ ಪಿಯು ಪರೀಕ್ಷೆಯಲ್ಲಿ 90% ಫಲಿತಾಂಶದ ದಾಖಲಿಸುವ ಮೂಲಕ ಉತ್ತಮ ಸಾಧನೆಗೈದಿದೆ.
ಸಹನಾ ನಾಯ್ಕ 95.33% ದಾಖಲಿಸಿ ಕಾಲೇಜಿಗೆ ಪ್ರಥಮ ಸ್ಥಾನ, ಸುಚಿತ್ರ ಶೇಟ್ (95%) ದ್ವಿತೀಯ ಹಾಗೂ ಗಗನಶ್ರೀ ನಾಯಕ (93%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಹನಾ ನಾಯ್ಕ (95.33%), ಸುಚಿತ್ರ ಶೇಟ್ (95%) ಹಾಗೂ ರಕ್ಷಿತಾ ನಾಯ್ಕ (93%) ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಭೌತ, ರಸಾಯನ್ರ ಮತ್ತು ಜೀವಶಾಸ್ತ್ರದಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ಗಗನಶ್ರೀ ಅರವಿಂದ ನಾಯಕ (93%), ಪ್ರವೀಣ್ ಸೋಮಾಪುರ್ಕರ (90.16%) ಜ್ಞಾನೇಶ್ವರಿ ಗೌಡ (89.83%) ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಕಲಾವತಿ ಗೌಡ (90%), ಅಶ್ವಿನಿ ಗೌಡ (89.63%) ಹಾಗೂ ಚೈತ್ರಾ ಗೌಡ (87%) ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಅಭಿವೃದ್ಧಿ ಸಮಿತಿ, ಪ್ರಾಚಾರ್ಯರು ಮತ್ತು ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top