• Slide
    Slide
    Slide
    previous arrow
    next arrow
  • ಒಳ ರೋಗಿಗಳಿಗೆ, ವಿಚಾರಣಾಧೀನ ಕೈದಿಗಳಿಗೆ ಮತದಾನಕ್ಕೆ ಅವಕಾಶ ನೀಡಲು ಆಗ್ರಹ

    300x250 AD

    ಕಾರವಾರ: ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳಿಗೆ ಹಾಗೂ ವಿಚಾರಣಾಧೀನ ಕೈದಿಗಳಿಗೆ ಮತದಾನಕ್ಕೆ ಅವಕಾಶ ನೀಡುವಂತೆ ಜನಶಕ್ತಿ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
    ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳಿಗೆ ಹಾಗೂ ವಿಚಾರಣಾಧೀನ ಕೈದಿಗಳಿಗೆ ಮತದಾನಕ್ಕೆ ಅವಕಾಶ ನೀಡುವಂತೆ ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿಕೊಂಡರು.
    ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದೆ. ಆಯಾ ಜಿಲ್ಲೆಗಳಲ್ಲಿ ಸ್ವೀಪ್ ಕಮಿಟಿಯು ಮತದಾನದ ಹೆಚ್ಚಳಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿಶೇಷಚೇತನರು ಹಾಗೂ ವೃದ್ಧರು ಮತದಾನದಿಂದ ವಂಚಿತರಾಗದAತೆ ನೋಡಿಕೊಳ್ಳಲು ಮನೆಯಿಂದ ಮತದಾನ ಮಾಡಲು ಚುನಾವಣಾ ಆಯೋಗ ವ್ಯವಸ್ಥೆಯನ್ನೂ ಮಾಡಿಕೊಂಡಿದೆ. ಆದರೆ ಇದರೊಂದಿಗೆ, ಪ್ರತಿ ಜಿಲ್ಲೆಗಳಲ್ಲಿ ಸಾವಿರಕ್ಕೂ ಮಿಕ್ಕಿ ಒಳರೋಗಿಗಳಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಇದ್ದು, ಅಂಥವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
    ಇದರೊಂದಿಗೆ ಪ್ರತಿ ಜಿಲ್ಲೆಯ ಬಂಧೀಖಾನೆಗಳಲ್ಲಿ ವಿಚಾರಣಾಧೀನ ಕೈದಿಗಳೂ ಇದ್ದಾರೆ. ಅಂಥವರು ಕೂಡ ಮತದಾನದಿಂದ ವಂಚಿತರಾಗಿರುತ್ತಾರೆ. ಹೀಗಾಗಿ ಇವರು ಕೂಡ ಮತದಾನದಲ್ಲಿ ಒಳಗೊಳ್ಳುವಂತಾಗಬೇಕು. ವಿಶೇಷಚೇತನರು ಹಾಗೂ ವೃದ್ಧರನ್ನು ಗುರುತಿಸಿದಂತೆ ಒಳ ರೋಗಿಗಳು ಹಾಗೂ ವಿಚಾರಣಾಧೀನ ಕೈದಿಗಳ ಅಂಕಿ- ಅಂಶ ಪಡೆದು, ಅಂಥವರಿಗೂ ವಿಶೇಷಚೇತನರು ಹಾಗೂ ವೃದ್ಧರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಂತೆ ವ್ಯವಸ್ಥೆ ಮಾಡಬೇಕು. ಆ ಮೂಲಕ ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ ಸಫಲಗೊಳ್ಳುವಂತೆ ಮಾಡಬೇಕು ಎಂದು ಈ ಮನವಿ ಮಾಡಿಕೊಂಡಿದ್ದಾರೆ.
    ವೇದಿಕೆಯ ಪ್ರಮುಖರಾದ ಬಾಬು ಶೇಖ್, ಸೂರಜ್ ಕುರುಮಕರ, ಅನಿಲ್ ನಾಯ್ಕ್, ಅಲ್ತಾಫ್ ಶೈಖ್, ಎನ್.ದತ್ತಾ, ಸಿ.ಎನ್.ನಾಯ್ಕ್ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top