ಅಂಕೋಲಾ: ಪಟ್ಟಣದಲ್ಲಿ ಕಳೆದ ಮೂರು ವರ್ಷದ ಹಿಂದೆ ನಡೆದ ಅವಳಿ ಕೊಲೆ ಪ್ರಕರಣ ಕುರಿತಂತೆ ಪ್ರಕರಣದ ಆರೋಪಿಯಾದ ಸುಬ್ರಾಯ (ಅಜಯ) ಪ್ರಭುಗೆ ದೋಷಿಯೆಂದು ತೀರ್ಮಾನಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ಘಟನೆ ವಿವರ: ಆರೋಪಿತ ಅಜಯ ಪ್ರಭು ತನ್ನ ತಾಯಿ ಹಾಗೂ ಚಿಕ್ಕಪ್ಪ ಪದ್ಮನಾಭ ಇವರೊಂದಿಗೆ ತಮ್ಮ ಪಿತ್ರಾರ್ಜಿತ ಆಸ್ತಿ ಪಾಲು ವಿಷಯದಲ್ಲಿ ದ್ವೇಷದಿಂದ ಇದ್ದವನು ಸದರಿ ಆಸ್ತಿಯನ್ನು ಪಾಲು ಮಾಡದೇ ಇರಲು ತನ್ನ ತಮ್ಮ ಅಮೀತ್ ಇತನ ಪತ್ನಿ ಮೃತ ಮೇದಾ ಇವಳೇ ಕಾರಣ ಅಂತಾ ಭಾವಿಸಿಕೊಂಡು ಮೇಧಾ ಇರುವ ಕೋಣೆಗೆ ಹೊಗಿ ಬಂದೂಕಿನಿಂದ ಮೇಧಾಳ ತಲೆಗೆ ಗುಂಡು ಹಾರಿಸಿ ಆ ಗುಂಡು ಆಕೆಯ ಮಗ ಅನೂಜ್ ಇತನ ತಲೆಯ ಎಡಬದಿಗೆ ತಾಗಿದ ಪರಿಣಾಮ ಇಬ್ಬರು ಮೃತಪಟ್ಟಿದ್ದರು.
ಆರೋಪಿತನ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದ್ದು ಇರುತ್ತದೆ. ಜಿಲ್ಲಾ ನ್ಯಾಯಾಲಯದಲ್ಲಿ ನೊಂದ ಕುಟುಂಬದ ಪರ ಸರ್ಕಾರಿ ವಕೀಲರಾದ ತನುಜಾ ಹೊಸಪಟ್ಟಣ ಮತ್ತು ರಾಜೇಶ ಎಂ. ಮಳಗಿಕರ ವಾದಿಸಿದ್ದರು. ಬಳಿಕ ನ್ಯಾಯಾಲಯ ಸಾಕ್ಷಿ ವಿಚಾರಣೆ ನಡೆಸಿ ಅರೋಪಿತನಿಗೆ ದೋಷಿಯೆಂದು ತಿರ್ಮಾನಿಸಿ ತೀರ್ಪು ನೀಡಿದ್ದು, ಏಪ್ರಿಲ್ 24ರಂದು ಶಿಕ್ಷೆ ಪ್ರಮಾಣವನ್ನು ಘೋಷಿಸಲಿದೆ.