• Slide
  Slide
  Slide
  previous arrow
  next arrow
 • ಸಂಭ್ರಮದಿಂದ ಜರುಗಿದ ಆಂಜನೇಯ ಮಂದಿರದ ವಾರ್ಷಿಕೋತ್ಸವ

  300x250 AD

  ದಾಂಡೇಲಿ: ನಗರದ 3 ನಂ.ಗೇಟ್ ಪಂಪ್ ಹೌಸ್ ವಿನಾಯಕ ನಗರದಲ್ಲಿರುವ ಶ್ರೀ ಆಂಜನೇಯ ಮಂದಿರದ 8ನೇ ವರ್ಷದ ವಾರ್ಷಿಕೋತ್ಸವ ಕಾರ‍್ಯಕ್ರಮವು ಗುರುವಾರ ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿತು.
  ಮುಂಜಾನೆಯಿಂದಲೇ ವಿವಿಧ ಪೂಜಾರಾಧನೆಗಳೊಂದಿಗೆ ಆರಂಭವಾದ ವಾರ್ಷಿಕೋತ್ಸವ ಕಾರ‍್ಯಕ್ರಮದಲ್ಲಿ ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಸಾರ್ವಜನಿಕ ಅನ್ನಪ್ರಸಾದ ವಿತರಣೆಯು ಜರುಗಿತು. ವಾರ್ಷಿಕೋತ್ಸವ ಕಾರ‍್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ, ಶ್ರೀ ಸ್ವಾಮಿಯ ದರ್ಶನವನ್ನು ಪಡೆದು, ಪ್ರಸಾದವನ್ನು ಸ್ವೀಕರಿಸಿದರು.
  ದೇವಸ್ಥಾನದ ಆಡಳಿತ ಸಮಿತಿ ಹಾಗೂ ಜೈ ಹನುಮಾನ್ ಯುವಕ ಮಂಡಳ ಮತ್ತು ಜೈ ಹನುಮಾನ್ ಯುವತಿ ಮಂಡಳದ ಆಶ್ರಯದಲ್ಲಿ ಪತ್ರಕರ್ತ ಸಂದೇಶ್ ಎಸ್.ಜೈನ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
  ವಾರ್ಷಿಕೋತ್ಸವದ ಯಶಸ್ಸಿಗೆ ಶ್ರೀಆಂಜನೇಯ ಮಂದಿರದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಜೈ ಹನುಮಾನ್ ಯುವಕ ಮಂಡಳ ಮತ್ತು ಜೈ ಹನುಮಾನ್ ಯುವತಿ ಮಂಡಳದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾಭಿಮಾನಿಗಳು ಶ್ರಮಿಸಿದ್ದರು. ವಿನಾಯಕ ನಗರದ ಮನೆ ಮನೆಗಳಲ್ಲಿ ಇಂದು ಹಬ್ಬದ ವಾತವರಣ ನಿರ್ಮಾಣವಾಗಿತ್ತು. ಜಾತಿ, ಮತ, ಬೇಧವೆನ್ನದೇ ನಮ್ಮೂರ ಮಂದಿರದ ವಾರ್ಷಿಕೋತ್ಸವ ಎಂದು ಅಭಿಮಾನ ಮತ್ತು ಗೌರವದಿಂದ ವಾರ್ಷಿಕೋತ್ಸವದ ಯಶಸ್ಸಿಗೆ ಸ್ಥಳೀಯ ಜನತೆ ದುಡಿದು ಪರಸ್ಪರ ಸೌಹಾರ್ದತೆಯನ್ನು ಮೆರೆದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top