ಕುಮಟಾ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಒಕ್ಕಲಿಗ ಮತವನ್ನ ಕಾಂಗ್ರೆಸ್ ತನ್ನತ್ತ ಸೆಳೆಯುವ ತಂತ್ರಕ್ಕೆ ಇಳಿದಿದ್ದು ಜಿಲ್ಲಾ ಕೆಪಿಸಿಸಿ ಸಂಯೋಜಕರಾಗಿ ಭಾಸ್ಕರ್ ಪಟಗಾರ್ ಅವರನ್ನ ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಸುಮಾರು ೨ ಲಕ್ಷಕ್ಕೂ ಅಧಿಕ ಒಕ್ಕಲಿಗ ಮತಗಳಿದ್ದು ಅದರಲ್ಲೂ ಕಾರವಾರ, ಕುಮಟಾ, ಭಟ್ಕಳ, ಶಿರಸಿ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿದೆ. ಇನ್ನು ಕುಮಟಾ ಕ್ಷೇತ್ರದಲ್ಲಿ ಈ ಬಾರಿ ಒಕ್ಕಲಿಗ ಅಭ್ಯರ್ಥಿಗೆ ಟಿಕೇಟ್ ನೀಡುವಂತೆ ಕೆಪಿಸಿಸಿಗೆ ಒತ್ತಡ ಹಾಕಲಾಗಿತ್ತು. ಅಂತಿಮವಾಗಿ ನಿವೇದಿತ್ ಆಳ್ವಾಗೆ ಟಿಕೇಟ್ ಘೋಷಣೆ ಮಾಡಲಾಗಿತ್ತು.
ಸದ್ಯ ಚುನಾವಣೆಯಲ್ಲಿ ಒಕ್ಕಲಿಗ ಮತಗಳನ್ನ ಪಕ್ಷದತ್ತ ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ಲಾನ್ ಮಾಡಿದ್ದು ಕುಮಟಾದ ಕಾಂಗ್ರೆಸ್ ಮುಖಂಡ ಭಾಸ್ಕರ್ ಪಟಗಾರ್‌ಗೆ ಕೆಪಿಸಿಸಿ ಜಿಲ್ಲಾ ಸಂಯೋಜಕ ಹುದ್ದೆಯನ್ನ ನೀಡಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷನಾಗಿ, ಜೆಡಿಎಸ್ ಪಕ್ಷದ ಯುವ ಘಟಕದ ಅಧ್ಯಕ್ಷನಾಗಿ, ಸದಸ್ಯ ಕಾಂಗ್ರೆಸ್ ಪಕ್ಷದಲ್ಲಿ ಭಾಸ್ಕರ್ ಪಟಗಾರ್ ಕಾರ್ಯನಿರ್ವಹಿಸುತ್ತಿದ್ದು ಕುಮಟಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಸಹ ಆಗಿದ್ದರು. ಟಿಕೇಟ್ ಕೈ ತಪ್ಪಿದ್ದು, ಪಕ್ಷದತ್ತ ಸಮುದಾಯದ ಮತಗಳನ್ನ ಸೆಳೆಯುವ ಉದ್ದೇಶದಿಂದ ಕೆಪಿಸಿಸಿ ಜಿಲ್ಲಾ ಸಂಯೋಜಕ ಹುದ್ದೆಯನ್ನ ಭಾಸ್ಕರ್ ಪಟಗಾರ್ ಗೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಪಕ್ಷ ಕೊಟ್ಟು ಜವಬ್ದಾರಿಯನ್ನ ಸಮರ್ಥವಾಗಿ ಎದುರಿಸಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮಿಸಲಾಗುವುದು ಎಂದು ಭಾಸ್ಕರ್ ಪಟಗಾರ್ ತಿಳಿಸಿದ್ದಾರೆ.