ಶಿರಸಿ: ತೋಟಗಾರರ ಕಲ್ಯಾಣ ಸಂಘ ಶಿರಸಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆ, ಯಲ್ಲಾಪುರ ಹಾಗೂ ಕ್ಯಾಪ್ಟನ್ಸ್ ಕ್ಯಾಂಪ್, ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏ.22, ಶನಿವಾರ ಬೆಳಿಗ್ಗೆ 10.30ಕ್ಕೆ ಭಾರತ ಸರ್ಕಾರದ ‘ಅಗ್ನಿಪಥ’ ಮಾಹಿತಿ ಶಿಬಿರವನ್ನು ಶಿರಸಿ ಹಾಗೂ ಯಲ್ಲಾಪುರದಲ್ಲಿ ಆಯೋಜಿಸಲಾಗಿದೆ.
17 ರಿಂದ 22 ವಯಸ್ಸಿನ ಯುವಕರು /ಯುವತಿಯರು ರಕ್ಷಣಾಪಡೆಯ ಅಗ್ನಿಪಥ ಯೋಜನೆಯಲ್ಲಿ ಪಾಲ್ಗೊಳ್ಳುವುದು ಹೇಗೆ?, ಶಾರೀರಿಕ, ಮಾನಸಿಕ, ಶೈಕ್ಷಣಿಕ ಅರ್ಹತೆಗಳೇನು?, ಅದರಿಂದ ನಿವೃತ್ತಿಯಾದ ನಂತರ ಮುಂದಿನ ಅವಕಾಶಗಳೇನು? ಇತ್ಯಾದಿ ಎಲ್ಲ ವಿವರಗಳನ್ನು ಮೇಜರ್ ಗಣಪತಿ ಹೆಗಡೆ ಹಾಗೂ ಕ್ಯಾಪ್ಟನ್ ಸುಜಯ್ ಹೆಗಡೆ, ಬೆಂಗಳೂರು ಇವರುಗಳು ಮಾಹಿತಿ ನೀಡಲಿದ್ದು, ಬೆಳಿಗ್ಗೆ 10.30 ರಿಂದ ಶಿರಸಿಯ ಶ್ರೀಪಾದ ಹೆಗಡೆ ಕಡವೆ ಕಲ್ಯಾಣಮಂಟಪ ಹಾಗೂ ಸಂಜೆ 4 ರಿಂದ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಮಾಹಿತಿ ಶಿಬಿರ ನಡೆಯಲಿದೆ.
ದೇಶ ಸೇವೆ ಮಾಡಲಿಚ್ಛಿಸುವ ಯುವ ಜನತೆಗೆ ಇದೊಂದು ಸದಾವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆಯಲು ಪ್ರಕಟಣೆಯಲ್ಲಿ ಕೋರಲಾಗಿದೆ.