Slide
Slide
Slide
previous arrow
next arrow

ಭಾರತ ಜಗತ್ತಿಗೆ ಬುದ್ಧನನ್ನು ನೀಡಿದೆಯೇ ಹೊರತು ಯುದ್ಧವನ್ನಲ್ಲ: ಮೋದಿ

300x250 AD

ನವದೆಹಲಿ: ಗೌತಮ ಬುದ್ಧನ ಉದಾತ್ತ ಬೋಧನೆಗಳು ಶತಮಾನಗಳಿಂದ ಅಸಂಖ್ಯಾತ ಜನರ ಮೇಲೆ ಪ್ರಭಾವ ಬೀರಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಜಾಗತಿಕ ಬೌದ್ಧ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಬುದ್ಧ ವ್ಯಕ್ತಿಯನ್ನು ಮೀರಿದ ತಿಳುವಳಿಕೆ ಮತ್ತು ಬುದ್ಧ ರೂಪವನ್ನು ಮೀರಿದ ಚಿಂತನೆ. ಭಗವಾನ್ ಬುದ್ಧನ ಬೋಧನೆಗಳಿಂದ ಸ್ಫೂರ್ತಿ ಪಡೆದ ಭಾರತವು ಜಾಗತಿಕ ಕಲ್ಯಾಣಕ್ಕಾಗಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತಮ್ಮ ಸರ್ಕಾರವು ಭಗವಾನ್ ಬುದ್ಧನ ಮೌಲ್ಯಗಳನ್ನು ನಿರಂತರವಾಗಿ ಹರಡುತ್ತಿದೆ” ಎಂದು ಹೇಳಿದರು.

“ನಮ್ಮ ಸರ್ಕಾರವು ಭಾರತ ಮತ್ತು ನೇಪಾಳದಲ್ಲಿ ಬುದ್ಧ ಸರ್ಕ್ಯೂಟ್ ಅನ್ನು ಸುಧಾರಿಸಿದೆ. ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ ಅಥವಾ ಲುಂಬಿನಿಯಾಗಲಿ ಭಾರತ ಅಂತಾರಾಷ್ಟ್ರೀಯ ಬೌದ್ಧ ಸಂಸ್ಕೃತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಅವುಗಳನ್ನು ಸಾಧಿಸಲು ಭಾರತ ಸಮಗ್ರವಾಗಿ ಶ್ರಮಿಸುತ್ತಿದೆ” ಎಂದು ಹೇಳಿದರು.

300x250 AD

ಈ ಅಮೃತ ಕಾಲ್‌ನಲ್ಲಿ ಭಾರತವು ಅನೇಕ ವಿಷಯಗಳ ಮೇಲೆ ಹೊಸ ಉಪಕ್ರಮಗಳನ್ನು ಕೈಗೊಂಡಿದೆ ಮತ್ತು ಇದಕ್ಕೆ ಅತ್ಯಂತ ದೊಡ್ಡ ಸ್ಫೂರ್ತಿ ಭಗವಾನ್ ಬುದ್ಧ. ಭಾರತ ಜಗತ್ತಿಗೆ ಬುದ್ಧನನ್ನು ನೀಡಿದೆಯೇ ಹೊರತು ಯುದ್ಧವನ್ನಲ್ಲ. ಇಂದು ಜಗತ್ತು ಅನುಭವಿಸುತ್ತಿರುವ ಯುದ್ಧ ಮತ್ತು ಅಶಾಂತಿಗೆ ಬುದ್ಧ ಶತಮಾನಗಳ ಹಿಂದೆಯೇ ಪರಿಹಾರವನ್ನು ನೀಡಿದ್ದಾನೆ. ಭಗವಾನ್ ಬುದ್ಧನ ಮಾರ್ಗವೇ ಭವಿಷ್ಯದ ದಾರಿ ಎಂದರು.

Share This
300x250 AD
300x250 AD
300x250 AD
Back to top