• Slide
    Slide
    Slide
    previous arrow
    next arrow
  • ಯುಕೆ: ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಹಿಂದೂ ವಿದ್ಯಾರ್ಥಿಗಳು

    300x250 AD

    ಲಂಡನ್‌: ಯುಕೆಯಲ್ಲಿನ ಕೆಲವೊಂದು ಕಡೆ ಹಿಂದೂ ವಿದ್ಯಾರ್ಥಿಗಳಿಗೆ ಮುಸ್ಲಿಂ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದು, ಮತಾಂತರವಾಗುವಂತೆ ಪೀಡಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಹೆನ್ರಿ ಜಾಕ್ಸನ್‌ ಸೊಸೈಟಿ ಎಂಬ ಥಿಂಕ್‌ ಟ್ಯಾಂಕ್‌ನ ವರದಿ ಬಹಿರಂಗಪಡಿಸಿದೆ.

    ಇಸ್ರೇಲ್‌ನ ಕ್ರಮಗಳಿಗೆ ಯಹೂದಿಗಳನ್ನು ಹೊಣೆಗಾರರನ್ನಾಗಿ ಮಾಡಿದ ರೀತಿಯಲ್ಲಿಯೇ ಭಾರತದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಹಿಂದೂ ವಿದ್ಯಾರ್ಥಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಶಾರ್ಲೆಟ್ ಲಿಟಲ್‌ವುಡ್ ಬರೆದಿರುವ ‘ಆ್ಯಂಟಿ ಹಿಂದೂ ಹೇಟ್ ಇನ್ ಸ್ಕೂಲ್ಸ್’ ಪುಸ್ತಕದಲ್ಲಿ ತಿಳಿಸಲಾಗಿದೆ. ಈ ಪುಸ್ತಕವನ್ನು 998 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿ ಬರೆಯಲಾಗಿದೆ.

    ಅಲ್ಲದೇ ಬ್ರಿಟನ್‌ನ ಶಿಕ್ಷಣದಲ್ಲಿ ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಲಾಗುತ್ತದೆ ಎಂದೂ ಇದರಲ್ಲಿ ಆರೋಪಿಸಲಾಗಿದೆ.

    ಲೀಸೆಸ್ಟರ್‌ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ನಡೆದ ಉದ್ವಿಗ್ನತೆಯ ಬಳಿಕ ಶಾಲೆಗಳಲ್ಲಿ ತಾರತಮ್ಯ ಹೆಚ್ಚುತ್ತಿದೆ. ಹಿಂದೂಗಳ ಮೇಲೆ ಗೋಮಾಂಸ ಕೂಡ ಎಸೆಯಲಾಗಿದೆ. ಯುಕೆಯಲ್ಲಿ ಹಿಂದೂ ಧರ್ಮವು ಮೂರನೇ ಸಾಮಾನ್ಯ ಧರ್ಮವಾಗಿದೆ, ಸುಮಾರು ಒಂದು ಮಿಲಿಯನ್ ಜನರು ತಾವು ಹಿಂದೂ ಎಂದು ಗುರುತಿಸಿಕೊಳ್ಳುತ್ತಾರೆ.

    300x250 AD

    ಬ್ರಿಟಿಷರು 400 ವರ್ಷಗಳ ಕಾಲಾ ಭಾರತವನ್ನು ಆಳ್ವಿಕೆ ಮಾಡಿದರೂ ಸಹ ಅವರಲ್ಲಿ ಹಿಂದೂ ಧರ್ಮದ ಜ್ಞಾನದ ಕೊರತೆಯಿದೆ. ಅವರು ನಮಗೆ ದೇವರ ಮೇಲಿರುವ ನಂಬಿಕೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಹಿಂದೂ ಮಕ್ಕಳು ಬ್ರಿಟನ್ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top