• Slide
    Slide
    Slide
    previous arrow
    next arrow
  • ನಡುರಸ್ತೆಯಲ್ಲಿ ತರಗೆಲೆಗಳಂತೆ ಹಾರಾಡಿದ 500ರೂ. ನೋಟುಗಳು

    300x250 AD

    ಗೋಕರ್ಣ: ನಡುರಸ್ತೆಯಲ್ಲಿ 500ರೂ. ಗಳ ನೋಟುಗಳು ತರಗೆಲೆಗಳಂತೆ ಬಿದ್ದು ಹಾರಾಡಿದ್ದು ಸಾರ್ವಜನಿಕರನ್ನು ಚಕಿತಗೊಳಿಸಿದೆ.

    ಗೋಕರ್ಣದ ಮೇಲಿನಕೇರಿ ಚೆಕ್‌ಪೋಸ್ಟ್ ಬಳಿ ರೂ. 500 ರ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಹಾರಾಡಿದ್ದು ದಾರಿಹೋಕರನ್ನು ಅವಾಕ್ಕಾಗಿಸಿದೆ. ಇದನ್ನು ಕಂಡ ಸಾರ್ವಜನಿಕರು ನೋಟುಗಳನ್ನು ಆಯ್ದುಕೊಂಡು ಸಮೀಪದ ಹೋಟೆಲ್ ಒಂದಕ್ಕೆ ತಲುಪಿಸಿ‌ ಪ್ರಾಮಾಣಿಕತೆ ಮೆರೆದಿದ್ದಾರೆ. ನೋಟುಗಳ ಜೊತೆ ಒಂದು ಎಟಿಎಂ ಕಾರ್ಡ್ ಬಿದ್ದಿದ್ದು, ಬಹುಷಃ ಯಾವುದೋ ಬೈಕ್ ಸವಾರನ ಕಿಸೆಯಿಂದ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಒಟ್ಟೂ 25000 ರೂ. ಮೌಲ್ಯದ ನೋಟುಗಳು ದೊರೆತಿದ್ದು, ಚುನಾವಣಾ ಸಮಯವಾಗಿರುವುದರಿಂದ ಈ ಘಟನೆ ಹಲವು ಊಹಾಪೋಹಗಳಿಗೂ ಎಡೆಮಾಡಿಕೊಡುವಂತಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top