Slide
Slide
Slide
previous arrow
next arrow

ಬೆಂಬಲಿಗರೊಂದಿಗೆ ಸಾಗಿ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಕೊಠಾರಕರ್

300x250 AD

ಕಾರವಾರ: ಕಾರವಾರ- ಅಂಕೋಲಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನಗರದ ಮಾಲಾದೇವಿ ಮೈದಾನದಿಂದ ಬೆಳಿಗ್ಗೆ ರ‍್ಯಾಲಿ ಆರಂಭಿಸಿದ್ದು ಐನೂರಕ್ಕೂ ಅಧಿಕ ಮಂದಿ ಬೆಂಬಲಿಗರು ಭಾಗವಹಿಸಿದ್ದರು. ಅಲ್ಲಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದು ಈ ವೇಳೆ ಬೆಂಬಲಿಗರು ಜೆಡಿಎಸ್ ಪಕ್ಷ ಹಾಗೂ ಅಭ್ಯರ್ಥಿಪರ ಘೋಷಣೆಗಳನ್ನು ಕೂಗಿದರು.

ಮಾಲಾದೇವಿ ಮೈದಾನದಿಂದ ಸವಿತಾ ವೃತ್ತ, ಸುಭಾಷ್ ವೃತ್ತ ಹಾಗೂ ಶಿವಾಜಿ ಚೌಕ್ ಮಾರ್ಗವಾಗಿ ನಾಮಪತ್ರ ಸಲ್ಲಿಕೆಯ ನಗರಸಭೆ ಕೇಂದ್ರದ ಬಳಿ ಆಗಮಿಸಿತು. ಈ ವೇಳೆ ಪತಿ ಚಂದ್ರಹಾಸ್ ಕೊಠಾರಕರ್, ಜೆಡಿಎಸ್ ರಾಜ್ಯ ಸಂಚಾಲಕ ರೋಷನ್ ಬಾವಾಜಿ ಸೇರಿದಂತೆ ಬೆಂಬಲಿಗರು ಜೊತೆ ಆಗಮಿಸಿದ್ದು, ಕ್ಷೇತ್ರದ ಚುನಾವಣಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಅವರಿಗೆ ನಾಮಪತ್ರವನ್ನ ಸಲ್ಲಿಕೆ ಮಾಡಿದರು.

300x250 AD

ಅವಕಾಶ ಕೊಟ್ಟರೆ ಮಾದರಿ ಕ್ಷೇತ್ರವನ್ನಾಗಿ ಮಾಡ್ತೀನಿ: ಕ್ಷೇತ್ರದಲ್ಲಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಯಾವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ ಅನ್ನೋದನ್ನ ಜನರು ನೋಡಿದ್ದಾರೆ. ಹೀಗಾಗಿ ಅದರ ಬಗ್ಗೆ ನಾನು ಜನರಿಗೆ ತಿಳಿಹೇಳಬೇಕಾದ ಅಗತ್ಯ ಇಲ್ಲವಾಗಿದ್ದು ಒಮ್ಮೆ ನನಗೆ ಕ್ಷೇತ್ರದಲ್ಲಿ ಅವಕಾಶ ನೀಡಿದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುವುದಾಗಿ ಚೈತ್ರಾ ಕೊಠಾರಕರ್ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ವಿರುದ್ದ ಜನರು ಬೇಸತ್ತಿದ್ದಾರೆ. ಇಬ್ಬರು ಅಭ್ಯರ್ಥಿಗೆ ಓಟು ಹಾಕಬಾರದು ಎಂದು ಜನರು ಬಯಸಿದ್ದು ಈ ಬಾರಿ ಜನರು ತನಗೆ ಬೆಂಬಲಿಸುತ್ತಾರೆ. ಇನ್ನು ತಾನು ಜೆಡಿಎಸ್ ಸೇರ್ಪಡೆಗೊಂಡು ಐದು ದಿನಗಳು ಮಾತ್ರ ಕಳೆದಿದ್ದು ಕಾಂಗ್ರೆಸ್‌ನಲ್ಲಿರುವ ಬೆಂಬಲಿಗರೊAದಿಗೆ ಸಂಪರ್ಕದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಾರವಾರಕ್ಕೆ ಆಗಮಿಸಲಿದ್ದು ಅವರ ನೇತೃತ್ವದಲ್ಲಿ ನನ್ನ ಬೆಂಬಲಿಗರು ಜೆಡಿಎಸ್ ಪಕ್ಷವನ್ನ ಸೇರಲಿದ್ದಾರೆ ಎಂದರು.
ಕಾರವಾರದಲ್ಲಿ ಜನಪ್ರತಿನಿಧಿಯಾದ ನಂತರ ಸಾಕಷ್ಟು ಬದಲಾವಣೆ ತರಬೇಕು ಎಂದು ಗುರಿಯನ್ನ ಇಟ್ಟುಕೊಂಡಿದ್ದೇನೆ. ಅವಕಾಶ ಕೊಟ್ಟರೆ ಬದಲಿಸಿ ತೋರಿಸಲಿದ್ದು, ಈ ಬಾರಿ ಜನರು ಒಮ್ಮೆ ತನಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top