• Slide
    Slide
    Slide
    previous arrow
    next arrow
  • 200ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

    300x250 AD

    ಮುಂಡಗೋಡ: ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ವಿವಿಧ ಪಕ್ಷಗಳ 200ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ತತ್ವಸಿದ್ಧಾಂತ ಮೆಚ್ಚಿ ಪಕ್ಷ ಸೇರ್ಪಡೆಗೊಂಡರು.

    ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಧುರೀಣ ನಿಂಗಜ್ಜಾ ಕೋಣನಕೇರಿ ನೇತೃತ್ವದಲ್ಲಿ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷೆ, ಸದಸ್ಯರು ಹಾಗೂ ಸೊಸೈಟಿ ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ. ತಾಲೂಕಿನ ಚೌಡಳ್ಳಿ ಗ್ರಾ.ಪಂ ಎಂದರೆ ಬಿಜೆಪಿ ಪಕ್ಷದ ಅತ್ಯಂತ ಪ್ರಭಾವಶಾಲಿ ಗ್ರಾಮ ಪಂಚಾಯತ್ ಎಂದು ಕರೆಸಿಕೊಂಡಿತ್ತು. ಸೇರ್ಪಡೆಗೊಂಡವರು ಅನ್ಯ ಪಕ್ಷಕ್ಕೆ ಭಯಪಟ್ಟು ಬಹಳಷ್ಟು ಜನ ಸೇರ್ಪಡೆಯಿಂದ ಹೊರಗುಳಿದಿದ್ದಾರೆ. ಇಲ್ಲದಿದ್ದರೆ 500ಕ್ಕಿಂತ ಅಧಿಕ ಅನ್ಯಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದರು ಎಂದು ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡ ಧುರೀಣ ನಿಂಗಜ್ಜ ಕೋಣನಕೇರಿ ತಿಳಿಸಿದ್ದಾರೆ.

    300x250 AD

    ಸೇರ್ಪಡೆ ಕಾರ್ಯಕ್ರಮದಲ್ಲಿ ಎಚ್.ಎಮ್.ನಾಯಕ್, ಪಂಚಾಕ್ಷರಿ ಸಂಗೂರಮಠ, ಕೃಷ್ಣ ಹಿರಳ್ಳಿ, ಎಮ್.ಎನ್.ಧುಂಡಶಿ, ಬಸವರಾಜ ನಡುವಿನಮನಿ, ಬಿ.ಕೆ.ಪಾಟೀಲ ಧರ್ಮರಾಜ ನಡೆಗೇರ, ರಾಜೂ ಹಿರೇಮಠ, ರಾಜೂ ಭೋವಿ, ಬಾಬಣ್ಣ ಲಾಡನವರ, ಗೋಪಾಲ ಪಾಟೀಲ, ಚಂದಾಪೂರ ಸೇರಿದಂತೆ ಮುಂತಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top