ನವದೆಹಲಿ: ಇಪ್ಸಾಸ್ ಗ್ಲೋಬಲ್ ಟ್ರಸ್ಟ್ ಮಾನಿಟರ್ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತವು ತನ್ನ ಸರ್ಕಾರದಲ್ಲಿ ಅತ್ಯುನ್ನತ ಮಟ್ಟದ ನಂಬಿಕೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.
21 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ದೇಶಗಳಲ್ಲಿ 16 ರಿಂದ 74 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಮತ್ತು ಕೆನಡಾ, ದಕ್ಷಿಣ ಆಫ್ರಿಕಾ, ಟರ್ಕಿ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 18 ರಿಂದ 74 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಸಮೀಕ್ಷೆಗೊಳಪಡಿಸಲಾಗಿದೆ.
ಕಳೆದ ವರ್ಷದ ಆಗಸ್ಟ್-ಸೆಪ್ಟೆಂಬರ್‌ನಲ್ಲಿ 15 ದಿನಗಳ ಅವಧಿಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ನಗರವಾಸಿ ಭಾರತೀಯರು ಎಲ್ಲಾ 11 ಸಂಸ್ಥೆಗಳು ಮತ್ತು ಸಂಘಟನೆಗಳಲ್ಲಿ ಅಪನಂಬಿಕೆಗಿಂತ ಹೆಚ್ಚಿನ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ. ಎಲ್ಲಾ ವಲಯಗಳಲ್ಲಿ ಭಾರತ ಸರ್ಕಾರದ ಮೇಲಿನ ನಂಬಿಕೆಯು ಅತ್ಯಧಿಕವಾಗಿದೆ, 52% ಸಮೀಕ್ಷೆಗೊಳಪಟ್ಟ ಜನ ನಂಬಿಕೆ ಪ್ರದರ್ಶಿಸಿದ್ದಾರೆ.
ನೆಟಿಜನ್‌ಗಳು ತಂತ್ರಜ್ಞಾನ ಕಂಪನಿಗಳನ್ನು ಹೆಚ್ಚು ನಂಬುತ್ತಾರೆ, ನಂತರ ಇಂಧನ, ಬ್ಯಾಂಕಿಂಗ್, ಚಿಲ್ಲರೆ ವ್ಯಾಪಾರ, ಹಣಕಾಸು ಸೇವೆಗಳು, ಔಷಧಗಳು, ಗ್ರಾಹಕ ಪ್ಯಾಕೇಜ್ಡ್ ಸರಕುಗಳು, ಸರ್ಕಾರ, ತೈಲ ಮತ್ತು ಅನಿಲ ಸಂಸ್ಥೆಗಳ ಮೇಲೆ ನಂಬಿಕೆ ಇರಿಸಿದ್ದಾರೆ.