Slide
Slide
Slide
previous arrow
next arrow

‘ಶನಿಕತೆ’ ತಾಳಮದ್ದಳೆ ಸಂಪನ್ನ

300x250 AD

ಶಿರಸಿ: ಇಲ್ಲಿನ ಹಂಚಿನಕೇರಿಯಲ್ಲಿ ಶನಿದೇವರ ಪೂಜೆ ಹಿನ್ನಲೆಯಲ್ಲಿ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ “ಶನಿ ಕತೆ” ಯಕ್ಷಗಾನ ತಾಳಮದ್ದಲೆಯು ಸಿದ್ದಾಪುರದ ಕಲಾಭಾಸ್ಕರ ಇಟಗಿ ಕಲಾ ಸಂಸ್ಥೆಯ ಕಲಾವಿದರಿಂದ‌ ಯಶಸ್ವಿಯಾಗಿ ನಡೆಯಿತು.

ಭಾಗವತರಾಗಿ ಸತೀಶ್ ಹೆಗಡೆ ದಂಟಕಲ್, ಮದ್ದಳೆ ವಾದನದಲ್ಲಿ ಶ್ರೀಪಾದ ಭಟ್ಟ ಮೂಡಗಾರು ಹಿಮ್ಮೇಳವನ್ನು ಒದಗಿಸಿದರು. ಶನಿರಾಯನಾಗಿ ಕೆರೆಕೊಪ್ಪ ಸುಬ್ರಾಯ ಹೆಗಡೆ, ವಿಕ್ರಮಾದಿತ್ಯನಾಗಿ ಕವಲಕೊಪ್ಪ ವಿನಾಯಕ ಹೆಗಡೆ,ವಬ್ರಾಹ್ಮಣ ಮತ್ತು ಅಲೋಲಿಕೆಯಾಗಿ ಇಟಗಿ ಮಹಾಬಲೇಶ್ವರ, ಚಂದ್ರಸೇನನಾಗಿ ಪ್ರಶಾಂತ ಹೆಗಡೆ ಗೋಡೆ, ಸುಶೀಲೆಯಾಗಿ ಪ್ರಸನ್ನ ಹೆಗಡೆ ಹೊಸಗದ್ದೆ, ನಂದಿಶೆಟ್ಟಿ ಮತ್ತು ಕಾರವಾನನಾಗಿ ಎಂ.ಆರ್.ಹೆಗಡೆ ದಂಟಕಲ್ ಮುಂತಾದವರು ಭಾವನಾತ್ಮಕವಾಗಿ ಪ್ರಸಂಗವನ್ನು ಕಟ್ಟಿ ಕೊಟ್ಟರು. ಮೂರುವರೆ ಗಂಟೆಗಳ ಕಾಲ ಸುಂದರವಾಗಿ ಮೂಡಿಬಂತು.
ಗಣಪತಿ ಸಿದ್ದು ಶೇಟ್ ಸ್ವಾಗತ ಮಾಡಿದರು. ರಾಜೇಶ ಶೇಟ್ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top