Slide
Slide
Slide
previous arrow
next arrow

ಜಿಲ್ಲಾ ಇಂಟಕ್ ಉಪಾಧ್ಯಕ್ಷರಾಗಿ ರಾಮಕೃಷ್ಣ ನಾಯ್ಕ ನೇಮಕ

300x250 AD

ಕಾರವಾರ: ಸಿದ್ದಾಪುರ ತಾಲೂಕಿನ ವಂದಾನೆಯ ರಾಮಕೃಷ್ಣ ಜಿ.ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲಾ ಇಂಟಕ್ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಜಿಲ್ಲಾ ಇಂಟಕ್ ಘಟಕದ ಅಧ್ಯಕ್ಷ ವಿಷ್ಣು ಹರಿಕಾಂತ ಆದೇಶ ಪತ್ರ ನೀಡಿದ್ದಾರೆ.

ರಾಜ್ಯ ಇಂಟಕ್ ಘಟಕದ ಅಧ್ಯಕ್ಷ ಹಾಗೂ ಮಾಜಿ ಸಚಿವರೂ, ಶಾಸಕರೂ ಆದ ಆರ್.ವಿ.ದೇಶಪಾಂಡೆರವರ ನಿರ್ದೇಶನ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಲಹೆ ಮೇರೆಗೆ ಈ ಆದೇಶವನ್ನು ನೀಡಲಾಗಿದೆ. ಜಿಲ್ಲಾ ಇಂಟಕ್ ಸಂಘಟನೆಯನ್ನು ಜಿಲ್ಲೆಯಲ್ಲಿ ಚಿರುಕುಗೊಳಿಸಿ, ಶಕ್ತಿಶಾಲಿಯನ್ನಾಗಿ ಬೆಳೆಸಲು ಇವರಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ವಿಷ್ಣು ಹರಿಕಾಂತ ತಿಳಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ಜಿಲ್ಲಾ ಇಂಟಕ್ ಕಾರ್ಯದರ್ಶಿ ಲಿಂಗಪ್ಪ ಕೊಂಡ್ಲಿ, ತಾಲೂಕು ಬ್ಲಾಕ್ ಇಂಟಕ್ ಅಧ್ಯಕ್ಷ ನಾರಾಯಣ ಕೆ.ನಾಯ್ಕ, ಮುಂಡಗೋಡ ತಾಲೂಕು ಬ್ಲಾಕ್ ಇಂಟಕ್ ಅಧ್ಯಕ್ಷ ಪಾಂಡುರ0ಗ ಪಾಟೀಲ, ಸಿದ್ದಾಪುರ ತಾಲೂಕು ಬ್ಲಾಕ್ ಇಂಟಕ್ ಅಧ್ಯಕ್ಷ ಲಂಬೋದರ ಹೆಗಡೆ ಹಾಗೂ ಮಂಜುನಾಥ್ ಕೆ.ನಾಯ್ಕ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top