Slide
Slide
Slide
previous arrow
next arrow

ಹವಾಮಾನ‌ ಬದಲಾವಣೆ ವಿರುದ್ಧ ಹೋರಾಟ ಪ್ರತಿಮನೆಯಿಂದ ಪ್ರಾರಂಭವಾಗಲಿ: ಪ್ರಧಾನಿ ಮೋದಿ

300x250 AD

ನವದೆಹಲಿ: ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅತ್ಯಂತ ಶಕ್ತಿಶಾಲಿ ಮಾರ್ಗವೆಂದರೆ ಅಭ್ಯಾಸದಲ್ಲಿ ಬದಲಾವಣೆ, ಇದು ಪ್ರತಿ ಮನೆಯಿಂದಲೂ ಪ್ರಾರಂಭವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವೀಡಿಯೋ ಸಂದೇಶದ ಮೂಲಕ ‘Making it Personal: How Behavioural Change Can Tackle Climate Change’ ಎಂಬ ವಿಶ್ವಬ್ಯಾಂಕ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಶತಕೋಟಿ ಜನರು ಒಟ್ಟಾಗಿ ಮಾಡಿದಾಗ ಸಣ್ಣ ಕಾರ್ಯಗಳು ದೊಡ್ಡ ಪರಿಣಾಮವನ್ನು ಬೀರುತ್ತವೆ. ಹವಾಮಾನ ಬದಲಾವಣೆ ವಿರುದ್ಧ ಕಾನ್ಫರೆನ್ಸ್ ಟೇಬಲ್‌ಗಳಿಂದ ಮಾತ್ರ ಹೋರಾಡಲಾಗುವುದಿಲ್ಲ ಆದರೆ ಪ್ರತಿ ಮನೆಯ ಊಟದ ಮೇಜುಗಳಿಂದಲೇ ಹೋರಾಡಬೇಕು ಎಂದು ಅವರು ಒತ್ತಿ ಹೇಳಿದರು.

ಮಿಷನ್ ಲೈಫ್ ಅಡಿಯಲ್ಲಿ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಭಾರತದ ಪ್ರಯತ್ನಗಳ ಬಗ್ಗೆ ಮಾತನಾಡಿದ ಮೋದಿ, ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವಗೊಳಿಸುವ ಬಗ್ಗೆ ಹೇಳಿದರು. ಸ್ಥಳೀಯ ಸಂಸ್ಥೆಗಳನ್ನು ಪರಿಸರ ಸ್ನೇಹಿಯನ್ನಾಗಿ ಮಾಡುವುದು, ನೀರು ಮತ್ತು ಇಂಧನ ಉಳಿತಾಯ, ತ್ಯಾಜ್ಯ ಮತ್ತು ಇ-ತ್ಯಾಜ್ಯವನ್ನು ಕಡಿಮೆ ಮಾಡುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ನೈಸರ್ಗಿಕ ಕೃಷಿ ಮತ್ತು ಸಿರಿಧಾನ್ಯಗಳನ್ನು ಉತ್ತೇಜಿಸುವುದು ಸೇರಿದಂತೆ ಈ ಉದ್ದೇಶದ ಬಗ್ಗೆ ವಿವರಿಸಿದರು.

300x250 AD

ಪ್ರಧಾನಿ ಮೋದಿಯವರು ತಮ್ಮ ಚಿಂತನೆಯನ್ನು ಭಾರತದ ಉದಾಹರಣೆಗಳೊಂದಿಗೆ ವಿವರಿಸಿದರು ಮತ್ತು ಸಾಮೂಹಿಕ ಚಳುವಳಿಗಳು ಮತ್ತು ನಡವಳಿಕೆಯ ಬದಲಾವಣೆಯ ಮೂಲಕ ಕಳೆದ ಕೆಲವು ವರ್ಷಗಳಲ್ಲಿ ಭಾರತದ ಜನರು ಬಹಳಷ್ಟು ಸಾಧಿಸಿದ್ದಾರೆ ಎಂದರು. ಸುಧಾರಿತ ಲಿಂಗ ಅನುಪಾತ, ಬೃಹತ್ ಸ್ವಚ್ಛತಾ ಅಭಿಯಾನ, ಎಲ್ಇಡಿ ಬಲ್ಬ್ ಅಳವಡಿಕೆಯ ಉದಾಹರಣೆಗಳನ್ನು ನೀಡಿದರು, ಇದು ಪ್ರತಿ ವರ್ಷ ಸುಮಾರು 39 ಮಿಲಿಯನ್ ಟನ್‌ ಅಷ್ಟ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಸೂಕ್ಷ್ಮ ನೀರಾವರಿ ಮೂಲಕ ಸುಮಾರು ಏಳು ಲಕ್ಷ ಹೆಕ್ಟೇರ್ ಕೃಷಿ ಭೂಮಿ ವ್ಯಾಪ್ತಿಯ ಮೂಲಕ ನೀರನ್ನು ಉಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮಿಷನ್ ಲೈಫ್‌ನಂತಹ ನಡವಳಿಕೆಯ ಉಪಕ್ರಮಗಳನ್ನು ಉತ್ತೇಜಿಸಲು ದೇಶಗಳನ್ನು ಬೆಂಬಲಿಸಲು ಜಾಗತಿಕ ಸಂಸ್ಥೆಗಳಿಗೆ ಪ್ರಧಾನಿ ಕರೆ ನೀಡಿದರು. ಅಂತಹ ಉಪಕ್ರಮಗಳನ್ನು ಬೆಂಬಲಿಸಲು ಸಾಕಷ್ಟು ಹಣಕಾಸು ವಿಧಾನಗಳನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಹೈಲೈಟ್ ಮಾಡಿದರು ಮತ್ತು ಹವಾಮಾನ ಹಣಕಾಸು ಮೇಲೆ ತನ್ನ ಗಮನವನ್ನು ಹೆಚ್ಚಿಸಲು ವಿಶ್ವಬ್ಯಾಂಕ್ ಅನ್ನು ಒತ್ತಾಯಿಸಿದರು

Share This
300x250 AD
300x250 AD
300x250 AD
Back to top