ಕುಮಟಾ: ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೇದಿತ್ ಆಳ್ವಾ ಹೆಸರು ಘೋಷಣೆಯಾಗುತ್ತಿದ್ದಂತೆ ಹಲವಾರು ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಅಂತೆಯೇ ಉತ್ತರಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಹುದ್ದೆಗೆ ಶಿವಾನಂದ ಹೆಗಡೆ ಕಡತೋಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. .
ಕುಮಟಾ ಕ್ಷೇತ್ರಕ್ಕೆ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡು ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ಹೆಗಡೆ ರಾಜೀನಾಮೆ ನೀಡಿದ್ದು, ಪಕ್ಷದಲ್ಲಾದ ಬೆಳವಣಿಗೆ ಬೇಸರ ಉಂಟುಮಾಡಿದೆ. ಆದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ ಶಿವಾನಂದ ಹೆಗಡೆ, ಸಚಿನ್ ನಿಗಾ ಅವರಿಗೆ ರಾಜೀನಾಮೆ ಪಾತ್ರ ಸಲ್ಲಿಸಿದ್ದಾರೆ.