• Slide
    Slide
    Slide
    previous arrow
    next arrow
  • ಕಾರವಾರ ಬಿಜೆಪಿಯಿಂದ ನಿತಿನ್ ರಾಯ್ಕರ್‌ಗೆ ಶ್ರದ್ಧಾಂಜಲಿ ಸಭೆ

    300x250 AD

    ಕಾರವಾರ: ಶಿರಸಿಯಲ್ಲಿ ನಡೆದ ಪಕ್ಷದ ಕಾರ್ಯಗಾರದ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುವ ವೇಳೆ ರಸ್ತೆ ಅಪಘಾತದಲ್ಲಿ ಅಗಲಿದ ಕಾರವಾರ ಬಿಜೆಪಿಯ ಕಾನೂನು ಸಲಹೆಗಾರ ಹಾಗೂ ನಗರ ಒಬಿಸಿ ಕಾರ್ಯದರ್ಶಿ ನಿತಿನ್ ರಾಯ್ಕರರವರ ದಿವ್ಯಾತ್ಮಕ್ಕೆ ಶಾಂತಿ ಕೋರಿ, ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಮೊದಲಿಗೆ ಕಾರ್ಯಕ್ರಮದಲ್ಲಿ ಎರಡು ನಿಮಿಷದ ಮೌನಾವೃತ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಅಪಘಾತ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಉಪಸ್ಥಿತರಿದ್ದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗುನಗಿ ಗಣ್ಯರಿಗೆ ಸ್ವಾಗತಿಸಿ, ನಡೆದ ಘಟನೆಯನ್ನು ವೇದಿಕೆಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ರಾಜ್ಯ ಓಬಿಸಿ ಮೋರ್ಚಾ ಸದಸ್ಯ ರಾಜೇಂದ್ರ ನಾಯ್ಕ್, ಮುರಳಿ ಗೋವೇಕರ್, ಸುನಿಲ್ ತಾಮ್ಸೆ, ವಿಶೇಷ ಆಹ್ವಾನಿತ ಮನೋಜ್ ಭಟ್‌ರವರು ನಿತಿನ್ ರಾಯ್ಕರ್ ಕುರಿತು ಇವರ ಅಗಲಿಕೆ ಪಕ್ಷಕ್ಕೆ ಅತ್ಯಂತ ದುಃಖದ ವಿಷಯವಾಗಿದ್ದು, ಸದಾ ಹಸನ್ಮುಖಿಯಾಗಿ ಪಕ್ಷದಲ್ಲಿ ಯಾವುದೇ ಅಪೇಕ್ಷೆ ಪಡದೇ ಪಕ್ಷ ಸೇವೆಯನ್ನು ದೇಶ ಸೇವೆ ಎಂದು ಭಾವಿಸಿ ಪಕ್ಷದ ಎಲ್ಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ನಿಷ್ಠಾವಂತ ಕಾರ್ಯಕರ್ತನ ಅಗಲಿಕೆ ಎಲ್ಲಾ ಕಾರ್ಯಕರ್ತರಲ್ಲಿ ಅತ್ಯಂತ ದುಃಖ ಉಂಟು ಮಾಡಿದೆ ಪಕ್ಷಕ್ಕೆ ಅವರ ಕೊಡುಗೆಯನ್ನು ಎಂದೆOದೂ ಮರೆಯಲಾಗದು ಎಂದು ಮಾತನಾಡಿ ತಮ್ಮ ದುಃಖವನ್ನು ಪ್ರಕಟಿಸಿದರು.
    ಈ ಸಂದರ್ಭದಲ್ಲಿ ಪಕ್ಷದ ನಗರ ಹಾಗೂ ಗ್ರಾಮೀಣ, ಪ್ರಮುಖರು, ಮುಖಂಡರು, ಹಾಗೂ ಕಾರ್ಯಕರ್ತರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top