• Slide
  Slide
  Slide
  previous arrow
  next arrow
 • ಏ.16ಕ್ಕೆ ಶರಾವತಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ

  300x250 AD

  ಕುಮಟಾ: ಇಲ್ಲಿಯ ಚಿತ್ತರಂಜನ ಟಾಕೀಜ್ ಹತ್ತಿರವಿರುವ ಮತ್ಸ್ಯ ಸಮೃದ್ಧಿ ಕಾಂಪ್ಲೆಕ್ಸ್ನಲ್ಲಿ ಶರಾವತಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭವು ಏ.16ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಉದ್ಘಾಟಕರಾಗಿ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ.
  ಸೇಂಟ್ ಜೋಸೆಫ್ ಚರ್ಚ್ ಮಣಕಿಯ ಧರ್ಮಗುರು ಫಾ.ವಿಲ್ಸನ್ ಫರ್ನಾಂಡಿಸ್ ಆರ್ಶೀರ್ವಚನ ನೀಡಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಯು.ಕೆ.ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಯಲ್ಲಾಪರದ ಅಧ್ಯಕ್ಷ ಪ್ರಮೋದ ಹೆಗಡೆ, ರೋಟರಿ ಡಿಸ್ಟ್ರಿಕ್ಟ್ ಗವರ್ನರ್ 2024- 25 ರೋಟರಿ ಆರ್.ಆಯ್.ಡಿಸ್ಟ್ರಿಕ್ಟ್ 3170ದ ಜಿಲ್ಲಾ ಪ್ರಾಂತಪಾಲ(2024-25)ರಾದ ಶರದ್ ಪೈ, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ಬೆಂಗಳೂರು ನಿರ್ದೇಶಕ ಮೋಹನದಾಸ ನಾಯಕ, ಚಲನಚಿತ್ರ ಹಿನ್ನೆಲೆ ಗಾಯಕ ರಜತ್ ಹೆಗಡೆ ಹಾಗೂ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಕಾರವಾರದ ಅಧ್ಯಕ್ಷ ರಾಜು ತಾಂಡೇಲ ಆಗಮಿಸಲಿದ್ದಾರೆಂದು ಶರಾವತಿ ಸೌಹಾರ್ದ ಸಹಕಾರಿ ಸಂಘಜ ಅಧ್ಯಕ್ಷ ಜಯವಿಠ್ಠಲ್ ಕುಬಾಲ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top