ಸಿದ್ದಾಪುರ: ಹೊಳೆಯಲ್ಲಿ ಈಜಲು ಹೋದ ವಿದ್ಯಾರ್ಥಿನಿಯೋರ್ವಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹಾವಿನ ಬೀಳು ಗ್ರಾಮದ ದೊರ್ಬೇ ಜಡ್ಡುಹರ್ಲ ಗುಂಡಿಯಲ್ಲಿ ನಡೆದಿದೆ.
8ನೇ ತರಗತಿ ವಿದ್ಯಾರ್ಥಿನಿ ಶಿರಸಿ ತಾಲೂಕಿನ ಅಮ್ಮಿನಳ್ಳಿಯ ಕಾಂಚಾಳದ ಧನ್ಯ ವೆಂಕಟೇಶ ಗೌಡ ಮೃತ ದುರ್ದೈವಿ. ತಾಲೂಕಿನ ಹಾವಿನ ಬೀಳು ಗ್ರಾಮದ ಹಸಗೋಡ ಗೆ ಬೇಸಿಗೆ ರಜೆಗಾಗಿ ದೊಡ್ಡಮ್ಮನ ಮನೆಗೆ ಬಂದಿದ್ದಳು. ಮಂಗಳವಾರ ಮಧ್ಯಾಹ್ನ 2.30 ಸುಮಾರಿಗೆ ನಾಲ್ಕು ಜನ ಸೇರಿಕೊಂಡು ಅಘನಾಶಿನಿ ಹೊಳೆಗೆ ಈಜುತ್ತಿರುವಾಗ ಆಳವಾದ ನೀರಿಗೆ ಹೋಗಿ ಮುಳುಗಿ ಮೃತಪಟ್ಟಿದ್ದಾಳೆ. ಬುಧವಾರ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸಂಬ0ಧಿಸಿದ0ತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ತೆರಳಿದ್ದ ವಿದ್ಯಾರ್ಥಿನಿ ಸಾವು
