Slide
Slide
Slide
previous arrow
next arrow

ಜೆಡಿಎಸ್ ಬಿ ಫಾರ್ಮ್ಗೆ ಪೂಜೆ ಸಲ್ಲಿಸಿದ ಕುಮಾರಸ್ವಾಮಿ

300x250 AD

ಶಿರಸಿ: ನಗರದ ಪ್ರಸಿದ್ದ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರ್ಮ್ಗೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮುಖಂಡ ಹೆಚ್.ಡಿ ಕುಮಾರಸ್ವಾಮಿರವರಿಂದ ಪೂಜೆ ಸಲ್ಲಿಸಿದರು.
ಪಂಚರತ್ನ ಯಾತ್ರೆ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿದ ಕುಮಾರಸ್ವಾಮಿ ಮೊದಲ ಮಾರಿಕಾಂಬ ದೇವಸ್ಥಾನಕ್ಕೆ ಆಗಮಿಸಿ ರಾಜ್ಯದ ಘೋಷಿತ ಅಭ್ಯರ್ಥಿಗಳ ಬಿ ಫಾರ್ಮನ್ನು ದೇವಿ ಸನ್ನಿಧಾನದಲ್ಲಿ ಇಟ್ಟು ಪೂಜೆ ಸಲ್ಲಿಸಿದರು.
ರಾಜ್ಯದ ಶಕ್ತಿ ಪೀಠದಲ್ಲಿ ಶಿರಸಿ ಮಾರಿಕಾಂಬ ದೇವಸ್ಥಾನ ಸಹ ಒಂದಾಗಿದ್ದು, ಶಕ್ತಿ ಪೀಠದಲ್ಲಿ ಪೂಜೆ ಸಲ್ಲಿಸಿ ಶಿರಸಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈಗೆ ಮೊದಲ ಬಿ ಫಾರ್ಮ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ ಶುಭ ಕೋರಿದರು.

300x250 AD
Share This
300x250 AD
300x250 AD
300x250 AD
Back to top