Slide
Slide
Slide
previous arrow
next arrow

ಸಂವಿಧಾನದ ಆಶಯಗಳನ್ನು ನಂಬಿದ ಕಾಂಗ್ರೆಸ್’ಗೆ ಬೆಂಬಲ ನೀಡಿ: ಆರ್.ವಿ.ದೇಶಪಾಂಡೆ

300x250 AD

ಹಳಿಯಾಳ: ಪಟ್ಟಣದ ಶಿವಾಜಿ ಮಹಾವಿದ್ಯಾಲಯದ ಮುಂಭಾಗದಲ್ಲಿ ಬುಧವಾರ ಬೆಳಿಗ್ಗೆ ಹಳಿಯಾಳ ತಾಲೂಕು ಬ್ಲಾಕ್ ಕಾಂಗ್ರೆಸ್ ಎಸ್.ಸಿ/ಎಸ್.ಟಿ ಘಟಕದ ಆಶ್ರಯದಡಿ ಹಮ್ಮಿಕೊಳ್ಳಲಾಗಿದ್ದ ಬ್ಲಾಕ್ ಕಾಂಗ್ರೆಸ್ ಎಸ್.ಸಿ/ಎಸ್.ಟಿ ಕಾರ್ಯಕರ್ತರ ಸಮಾವೇಶವು ಯಶಸ್ವಿಯಾಗಿ ಸಂಪನ್ನಗೊ0ಡಿತು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿಟ್ಟು ಸಹಸ್ರ ಸಂಖ್ಯೆಯಲ್ಲಿ ಜನಸಮೂಹ ಸೇರಿರುವುದನ್ನು ನೋಡಿದಾಗ ಕಾಂಗ್ರೆಸ್ ಪಕ್ಷದ ಬಗ್ಗೆ ಜನತೆಗಿರುವ ಅಭಿಮಾನ ಮತ್ತು ಗೌರವ ಕಂಡು ಬರುತ್ತಿದೆ. ಕಾಂಗ್ರೆಸ್ ಪಕ್ಷ ಸರ್ವ ಸಮಾನತೆಯ, ಸರ್ವರಿಗೂ ಸಮಪಾಲು ಮತ್ತು ಸೌಹಾರ್ದತೆಯನ್ನು ಸಾರುವ ಪಕ್ಷವಾಗಿದೆ. ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ ನಾವೆಲ್ಲರೂ ಒಂದೆ ಎಂಬ ಭಾತೃತ್ವವನ್ನು ಮೆರೆಯುವ ಪಕ್ಷವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ನಂಬಿಕೊ0ಡು ಅದಕ್ಕೆ ಬದ್ಧವಾಗಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಾ ಬಂದಿದೆ. ನಮ್ಮ ದೇಶದ ಪರಮಗ್ರಂಥವಾಗಿರುವ ಸಂವಿಧಾನವನ್ನೆ ಬದಲಾವಣೆ ಮಾಡಬೇಕೆಂಬ ಹೇಳಿಕೆಗಳನ್ನು ನೀಡುವ ಮೂಲಕ ಈ ದೇಶದ ಜನತೆಯ ಭಾವನೆಗಳಿಗೆ ಮತ್ತು ಗೌರವಕ್ಕೆ ಧಕ್ಕೆ ತರುತ್ತಿರುವ ಬಿಜೆಪಿಯನ್ನು ಕಿತ್ತೊಗೆದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಎಸ್.ಸಿ ವಿಭಾಗದ ಜಿಲ್ಲಾಧ್ಯಕ್ಷರಾದ ಬಸವರಾಜ ದೊಡ್ಮಣಿಯವರು ಆರ್.ವಿ.ದೇಶಪಾಂಡೆಯವರ ರಾಜಕೀಯ ಅನುಭವ, ನಾಯಕತ್ವ, ಜನಸೇವೆಯನ್ನು ಪರಿಗಣಿಸಿ ಈ ಬಾರಿ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಬಂದಿರುವುದು ಹಳಿಯಾಳ ಕ್ಷೇತ್ರಕ್ಕೆ ಮಾತ್ರವಲ್ಲ ಇಡೀ ಜಿಲ್ಲೆಗೆ ಸಂದ ಗೌರವ ಎಂದರು. ಜಾತಿ, ಧರ್ಮದ ಮೇಲೆ ಪರಸ್ಪರ ಸಂಘರ್ಷವನ್ನು ಹಚ್ಚಿ ರಾಜಕೀಯ ಮಾಡುವ ಬಿಜೆಪಿಯಿಂದ ಅಭಿವೃದ್ಧಿ ಶೂನ್ಯ. ರಾಜ್ಯದಲ್ಲಿ ಅಭಿವೃದ್ಧಿಯ ಯುಗ ಆರಂಭವಾಗಬೇಕಾದರೇ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ನಾವು ನೀವೆಲ್ಲರೂ ಕಂಕಣಬದ್ಧರಾಗಬೇಕೆ0ದು ಕರೆ ನೀಡಿದರು.
ಎಐಸಿಸಿ ಸದಸ್ಯರಾದ ಪ್ರಶಾಂತ್ ದೇಶಪಾಂಡೆಯವರು ಮಾತನಾಡಿ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿಗೆ ವಿಶೇಷ ಒತ್ತು ನೀಡಿ ಕೆಲಸ ನಿರ್ವಹಿಸಲಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸದಢೃಗೊಂಡಾಗ ತಾಲೂಕಿನ ಪ್ರಗತಿ ಸಾಧ್ಯ ಎಂದು ಅರಿತು ಆ ನಿಟ್ಟಿನಲ್ಲಿ ಆರ್.ವಿ.ದೇಶಪಾಂಡೆಯವರು ನಿರೀಕ್ಷೆಗೂ ಮೀರಿ ಕೆಲಸ ನಿರ್ವಹಿಸಿದ್ದಾರೆ ಎಂದರು. ನೀವೆಲ್ಲ ದೇಶಪಾಂಡೆಯವರ ಮೇಲೆ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿಟ್ಟಿರುವುದಕ್ಕೆ ಇಲ್ಲಿ ನೆರೆದಿರುವ ಜನಸಮೂಹವೆ ಸಾಕ್ಷಿ ಎಂದರು.

300x250 AD

ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪಾಟೀಲ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾದ ಶಂಕರ್ ಬೆಳಗಾಂವಕರ್, ಕೆಪಿಸಿಸಿ ಸದಸ್ಯರಾದ ಸುಭಾಷ್ ಕೋರ್ವೆಕರ್, ಹಳಿಯಾಳ ಪುರಸಭೆಯ ಅಧ್ಯಕ್ಷ ಅಜರ್ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣಾ ಮಾದರ, ಪುರಸಭೆಯ ಸದಸ್ಯರಾದ ಅನಿಲ್ ಚೌವ್ಹಾಣ್, ಫಯಾಜ್ ಶೇಖ್, ಕಾಂಗ್ರೆಸ್ ಮುಖಂಡರುಗಳಾದ ಉಮೇಶ್ ಬೋಳಶೆಟ್ಟಿ, ಪ್ರಸಾದ್ ಹುಣ್ಸವಾಡ್ಕರ್, ದೇಮಾಣಿ ಶಿರೋಜಿ, ಪಕ್ಷದ ಮುಖಂಡರುಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿವಿಧ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಎಸ್.ಸಿ/ಎಸ್ಟಿ ವಿಭಾಗದ ತಾಲೂಕು ಘಟಕದ ಅಧ್ಯಕ್ಷರಾದ ಪರಶುರಾಮ.ಎಚ್.ಬಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೇರಿ ಗರಿಬಾಚೆ ವಂದಿಸಿದರು. ಜೂಲಿಯಾನ ಫರ್ನಾಂಡೀಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪಟ್ಟಣದ ಶಿವಾಜಿ ವೃತ್ತದಿಂದ ಸಮಾವೇಶ ನಡೆಯುವವರೆಗೆ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.

Share This
300x250 AD
300x250 AD
300x250 AD
Back to top