ಶಿರಸಿ: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವು ಶ್ರೀ ಲಕ್ಷ್ಮಿನೃಸಿಂಹ ದೇವರ ರಥೋತ್ಸವವನ್ನು, 2008ರಿಂದ ಕೃಷಿಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಕೃಷಿ ಜಯಂತಿ ಎಂದು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ. ಶ್ರೀ ಸೋಂದಾ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಮುಖಾಂತರ ನಡೆಸುವ ಕೃಷಿ ಜಯಂತಿ 2023ರ ಹಿನ್ನೆಲೆಯಲ್ಲಿ ಪ್ರೌಢ ಶಾಲಾ ಮಕ್ಕಳಲ್ಲಿ ಕೃಷಿ ಪದ್ಧತಿ ತಂತ್ರಜ್ಞಾನದದ ಬಗ್ಗೆ ಮಾಹಿತಿ ಹಾಗೂ ಆಸಕ್ತಿ ಬೆಳೆಸಲು, ಕೃಷಿ-ತೋಟಗಾರಿಕಾ-ಹೈನುಗಾರಿಕೆ-ಪರಿಸರ-ಜೀವ ಜಗತ್ತು-ಜಲ ಮೂಲಗಳ ಸಂರಕ್ಷಣೆ ಕುರಿತಂತೆ ರಾಜ್ಯ ಮಟ್ಟದಲ್ಲಿ ಅಂತರ್ಜಾಲದ ಮುಖಾಂತರ ಕೃಷಿ ರಸಪ್ರಶ್ನೆ ಕಾರ್ಯಕ್ರಮವನ್ನು ಏ. 23 ರಂದು ನಡೆಸಲು ಉದ್ದೇಶಿಸಲಾಗಿದ್ದು, ಅಂದು ಮುಂಜಾನೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 6 ಘಂಟೆಯವರೆಗೆ ನಡೆಯಲಿದೆ.
ಇಂದಿನ ಉದ್ಯಮಗಳ ಭರಾಟೆಯಲ್ಲಿ ಅವಗಣನೆಗೆ ಒಳಗಾಗುತ್ತಿರುವ ಕೃಷಿಗೆ ನವಚೇತನ ತುಂಬುವ ನಿಟ್ಟಿನಲ್ಲಿ ಕೃಷಿಯ ಉಳಿವಿಗಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಈ ಕಿರು ಪ್ರಯತ್ನಕ್ಕೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ಈ ವರ್ಷ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದೊಂದಿಗೆ ಕೈ ಜೋಡಿಸುವದರೊಂದಿಗೆ ತನ್ನ ವ್ಯಾಪ್ತಿಯಲ್ಲಿಯ ಎಲ್ಲ ಮಾಧ್ಯಮಿಕ ಶಾಲಾ ಮಕ್ಕಳು ಸದ್ರಿ ಆನ್ ಲೈನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆದೇಶ ನೀಡಿರುವದು ಶ್ಲಾಘನೀಯವಾಗಿದೆ.
ಏ. 23 ರಂದು ಅಂತರ್ಜಾಲದ (ಆನ್ ಲೈನ್) ಮುಖಾಂತರ ನಡೆಸಲಾಗುವ ಸ್ಪರ್ಧೆಯಲ್ಲಿ ಮಕ್ಕಳು ಮನೆಯಲ್ಲಿಯೇ ಕುಳಿತು ಮೊಬೈಲ್ ಮುಖಾಂತರ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದರಲ್ಲಿ ವಿಜೇತ ಮಕ್ಕಳಿಗೆ ಪ್ರಥಮ :- 5000/- ರೂ. ನಗದು ಸ್ಮರಣೆಕೆ ಪ್ರಶಸ್ತಿ ಪತ್ರ, ದ್ವಿತೀಯ :- 3000/- ರೂ. ನಗದು ಸ್ಮರಣೆಕೆ ಪ್ರಶಸ್ತಿ ಪತ್ರ, ತೃತೀಯ : 2000/- ರೂ. ನಗದು ಸ್ಮರಣೆಕೆ ಪ್ರಶಸ್ತಿ ಪತ್ರವನ್ನು ಮೇ. 3 ರಂದು ನಡೆಯುವ ಶ್ರೀ ಲಕ್ಷ್ಮಿನೃಸಿಂಹ ದೇವರ ರಥೋತ್ಸವದಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ವಿಜೇತ ಮಕ್ಕಳಿಗೆ ನೀಡಿ ಹರಸಲಿದ್ದಾರೆ ಮತ್ತು ಅಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಮಕ್ಕಳು ತಮ್ಮ ಊರಿನಿಂದ ಬಂದು ಹೋಗುವ ಪ್ರವಾಸ ಭತ್ಯೆ ಕೂಡಾ ನೀಡಲಾಗುವದು.
ಆನ್ ಲೈನ್ ಕೃಷಿ ರಸಪ್ರಶ್ನೆ ಕಾರ್ಯಕ್ರಮ ಸಂಘಟನೆಯಲ್ಲಿ ಶ್ರೀ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಸ್ಪರ್ಧಾ ವಿಭಾಗದೊಂದಿಗೆ ಶ್ರೀ ಸ್ವರ್ಣವಲ್ಲೀ ಯುವ ಪರಿಷತ್ ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆಯವರು ಕೈ ಜೋಡಿಸಿರುತ್ತಾರೆ.
ಕ್ವಿಜ್ ಲಿಂಕ್ https://www.facebook.com/swarnapatram?mibextid=ZbWKwL
https://instagram.com/swarnachitram?igshid=MTIzZWQxMDU ಏ.23 ರಂದು ಶ್ರೀ ಸ್ವರ್ಣವಲ್ಲೀ ಭಕ್ತವೃಂದ ಫೇಸ್ ಬುಕ್ – ಇನ್ ಸ್ವಾಗ್ರಾಂ-ವಾಟ್ಸಾಪ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಕಛೇರಿಗಳಲ್ಲಿ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.