ಶಿರಸಿ: ತಾಲೂಕಿನ ಗ್ರಾಮೀಣ ಭಾಗದ ಪ್ರಮುಖ ಸೇವಾ ಸಹಕಾರಿ ಸಂಘ ಎಂದು ಗುರುತಿಸಿಕೊಂಡಿರುವ ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ತನ್ನ ಶತಮಾನೋತ್ಸವ ಸಮಾರಂಭವನ್ನು ಏಪ್ರಿಲ್ 12ರಂದು ಆಚರಿಸಿಕೊಳ್ಳುತ್ತಿದೆ. ಕ್ರಿ.ಶ 1919 ರಲ್ಲಿ ಆರಂಭಗೊಂಡ ಸಂಘವು ಜಾಗತಿಕ ಯುದ್ಧದ ಕಠಿಣ ಸಂದರ್ಭದಲ್ಲಿ ಕೂಡ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿತು. ಸ್ವಾತಂತ್ರ್ಯಾ ನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮಹನೀಯರು ಹಾಗೂ ಪರಮೇಶ್ವರ ಮಾಬ್ಲೇಶ್ವರ ಹೆಗಡೆ, ಹೊನ್ನೆಕಟ್ಟಾ ಇವರ ಸುದೀರ್ಘ ಅವಧಿಯ ಅಧ್ಯಕ್ಷತೆ ಸಂಘಕ್ಕೆ ನೆಲೆ ಬೆಲೆಯನ್ನು ಒದಗಿಸಿಕೊಟ್ಟಿತು. ಸಹಕಾರಿ ತತ್ವಗಳ ಅನುಷ್ಠಾನ ತನ್ನ ರೈತ ಪರ ಕಾರ್ಯನಿರ್ವಹಣೆಯ ಮೂಲಕ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘವು ಇಂದು ರಾಜ್ಯಮಟ್ಟದಲ್ಲಿಯೇ ಗುರುತಿಸಿಕೊಂಡಿದೆ.
ಉದ್ಘಾಟನಾ ಸಮಾರಂಭ: ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಏಪ್ರಿಲ್ 12 ಬುಧವಾರ ಜರುಗಲಿದೆ. ಉದ್ಘಾಟನಾ ಸಮಾರಂಭ ಬೆಳಗ್ಗೆ 10.00 ಗಂಟೆಗೆ ಜರುಗಲಿದ್ದು, ಸಮಾರಂಭದ ಉದ್ಘಾಟನೆಯನ್ನು ಕ್ಯಾಂಪ್ಕೋ ಲಿ. ಅಧ್ಯಕ್ಷ ಕಿಶೋರ್ ಕುಮಾರ್ ಕೊಡಗಿ ನೆರವೇರಿಸಲಿದ್ದಾರೆ. ಸಂಘದ ಇತಿಹಾಸ, ಹೆಗಡೆಕಟ್ಟಾ ಭಾಗದ ಅಮೂಲ್ಯ ನೆನಪುಗಳನ್ನು ಮರುಕಳಿಸುವ “ಶತಸ್ಮೃತಿ” ಸ್ಮರಣ ಸಂಚಿಕೆ ಲೋಕಾರ್ಪಣೆ ಯಾಗಲಿದ್ದು, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಂ.ಆರ್. ಹೆಗಡೆ, ಗೊಡ್ವೆಮನೆ ಬಿಡುಗಡೆಗೊಳಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೊ ನಿರ್ದೇಶಕ ಹಾಗೂ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷ ಶಂಭುಲಿಂಗ ಹೆಗಡೆ, ನಡಗೋಡ ಹಾಗೂ ಟಿಎಸ್ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ಕಡವೆ, ಧಾರವಾಡ ಹಾಲು ಒಕ್ಕೂಟ ಹಾಗೂ ನಿರ್ದೇಶಕರು, ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ,ತ್ಯಾಗಲಿ ಗೂ, ಗ್ರಾ ಸೇ. ಸ. ಸಂ. ನಿ.,ನಾಣಿಕಟ್ಟಾಅಧ್ಯಕ್ಷ ಎನ್. ಬಿ. ಹೆಗಡೆ, ಮತ್ತೀಹಳ್ಳಿ, ಇವರುಗಳು ಉಪಸ್ಥಿತರಿರಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಹೆಗಡೆಕಟ್ಟಾ ಗ್ರೂ. ಗ್ರಾ. ಸೇ. ಸ. ಸಂಘ ನಿ., ಹೆಗಡೆಕಟ್ಟಾ ಅಧ್ಯಕ್ಷ ಎಂ. ಪಿ. ಹೆಗಡೆ, ಕೊಟ್ಟೆಗದ್ದೆ ವಹಿಸಲಿದ್ದಾರೆ.
ಸನ್ಮಾನ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ: ಮಧ್ಯಾಹ್ನ 3:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಟಿ. ಎಂ. ಎಸ್. ಶಿರಸಿ ಅಧ್ಯಕ್ಷ ಜಿ. ಎಂ. ಹೆಗಡೆ, ಹುಳಗೋಳ, ತಟ್ಟೀಸರ ಗ್ರೂ, ಗ್ರಾ ಸೇ. ಸ. ಸಂ. ನಿ., ಮೇಲಿನೋಣಿಕೇರಿ ಅಧ್ಯಕ್ಷ ಜಿ. ಟಿ. ಹೆಗಡೆ, ತಟ್ಟೀಸರ, ಹುಳಗೋಳ ಗೂ, ಗ್ರಾ ಸೇ. ಸ. ಸಂ. ನಿ., ಭೈರುಂಬೆ ಅಧ್ಯಕ್ಷ ವಿ. ಎಸ್. ಹೆಗಡೆ, ಕೆಶಿನ್ಮನೆ, ಮೆಣಸಿ ಗ್ರೂ, ಗ್ರಾ ಸೇ. ಸ. ಸ. ನಿ. ಅಧ್ಯಕ್ಷ ಎನ್. ಎಸ್. ಹೆಗಡೆ, ಕೋಟಿಕೊಪ್ಪ, ಮುಂಡಗನಮನೆ ಗ್ರೂ, ಗ್ರಾ ಸೇ. ಸ. ಸಂ. ನಿ., ಮುಂಡಗನಮನೆ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಕೆ.ಡಿ.ಸಿ.ಸಿ. ಬ್ಯಾಂಕ್ ಲಿ. ವ್ಯವಸ್ಥಾಪಕ ನಿರ್ದೇಶಕ ಆರ್. ಜಿ. ಭಾಗ್ವತ್, ಸಹಕಾರ ಸಂಘಗಳು ಉಪ ನಿಬಂಧಕರು, ಮಂಜುನಾಥ ಆರ್., ಸಹಾಯಕ ನಿಬಂಧಕರು ಟಿ. ವಿ. ಶ್ರೀನಿವಾಸಉಪಸ್ಥಿತರಿರಲಿದ್ದಾರೆ.ಕಾರ್ಯಕ್ರಮ ಅಧ್ಯಕ್ಷತೆಯನ್ನು ಹೆಗಡೆಕಟ್ಟಾ ಗ್ರೂ, ಗ್ರಾ ಸೇ. ಸ. ಸಂ. ನಿ. ಹೆಗಡೆಕಟ್ಟಾ ಅಧ್ಯಕ್ಷ ಎಂ. ಪಿ. ಹೆಗಡೆ, ಕೊಟ್ಟೆಗದ್ದೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ:
ನಾದಲಹರಿ: ಸಾಯಂಕಾಲ 5:30 ರಿಂದ ಸಂಗೀತ ಕಾರ್ಯಕ್ರಮ ನಾದಲಹರಿ ನಡೆಯಲಿದ್ದು, ಉಸ್ತಾದ್ ಫಯಾಝ್ ಖಾನ್, ಬೆಂಗಳೂರು ಗಾಯನ ಪ್ರಸ್ತುತಪಡಿಸಲಿದ್ದಾರೆ. ಅವರಿಗೆ ತಬಲಾ ಸಾಥ್ ತ್ರಿಲೋಚನ ಕಂಪ್ಲಿ, ಬೆಂಗಳೂರು, ಸಾರಂಗಿ ಸಾಥ್ ಸರ್ಫರಾಜ್ ಖಾನ್, ಬೆಂಗಳೂರು ನೀಡಲಿದ್ದಾರೆ.
ಯಕ್ಷಗಾನ: ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ “ಮಾಗಧ ವಧೆ ಮತ್ತು ಚಂದ್ರಾವಳಿ ವಿಲಾಸ” ರಾತ್ರಿ 9.30 ಗಂಟೆಯಿಂದ ಯಕ್ಷಗಾನ ಪ್ರದರ್ಶನವಿದ್ದು, ಮುಮ್ಮೇಳದಲ್ಲಿ ವಿದ್ಯಾಧರ ರಾವ್, ಜಲವಳ್ಳಿ, ಅಶೋಕ ಭಟ್ಟ ಸಿದ್ದಾಪುರ, ಉದಯ ಹೆಗಡೆ ಕಡಬಾಳ, ಶ್ರೀಧರ ಭಟ್ಟ ಕಾಸರಗೋಡ ಹಾಗೂ ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ಯ, ಜನ್ಸಾಲೆ, ಶಂಕರ ಭಟ್ಟ, ಮದ್ದಳೆಯಲ್ಲಿ ಸುನಿಲ್ ಭಂಡಾರಿ, ಕಡತೋಕ ಚಂಡೆಯಲ್ಲಿ ಪ್ರಸನ್ನ ಭಟ್ಟ, ಹೆಗ್ಗಾರ ಇರಲಿದ್ದಾರೆ.