Slide
Slide
Slide
previous arrow
next arrow

ಅಪಘಾತದಲ್ಲಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತ ನಿತಿನ್ ರಾಯ್ಕರ್ ನಿಧನ

300x250 AD

ಶಿರಸಿ : ಏ. 7 ರಂದು ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಕಾರು ಅಪಘಾತವಾಗಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಿತೀನ್ ರಾಯ್ಕರ್ ಕೊನೆಯುಸಿರೆಳೆದಿದ್ದಾರೆ.

ಶಿರಸಿಯಲ್ಲಿ ನಡೆದ ಬಿಜೆಪಿ ಕಾರ್ಯಾಗಾರಕ್ಕೆಂದು ಆಗಮಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು, ನಿತಿನ್ ರಾಯ್ಕರ್ ಜೊತೆಗೆ ಕಾರಿನಲ್ಲಿ ಇದ್ದ ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು ಆದರೆ ನಿತಿನ್ ರಾಯ್ಕರ್ ಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು.

300x250 AD

ನಂತರ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದಾದರೂ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ. ಕಾರವಾರದಲ್ಲಿ ನ್ಯಾಯವಾದಿಯಾಗಿದ್ದ ನಿತಿನ್ ಬಿಜೆಪಿಯ ಕಾನೂನು ಸಲಹೆಗಾರರಾಗಿದ್ದರು ಎಂದು ತಿಳಿದುಬಂದಿದೆ.

Share This
300x250 AD
300x250 AD
300x250 AD
Back to top