• Slide
    Slide
    Slide
    previous arrow
    next arrow
  • ಪಕ್ಷ ಘೋಷಿಸಿದ ಅಭ್ಯರ್ಥಿಯನ್ನ ಗೆಲ್ಲಿಸಿ: ಗಣೇಶ್ ಕಾರ್ಣಿಕ್

    300x250 AD

    ಶಿರಸಿ: ಪಕ್ಷ ಘೋಷಿಸಿದ ಅಭ್ಯರ್ಥಿಯ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿ ಈ ಬಾರಿ ಗೆಲ್ಲಿಸಿಕೊಂಡು ಬನ್ನಿ ಎಂದು ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದರು.
    ನಗರದ ರಾಘವೇಂದ್ರ ಮಠದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಗಾರವನ್ನ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಕಾರ್ಯಕರ್ತರು ರಾಷ್ಟ್ರಹಿತದ ಬದ್ಧತೆ ಇಟ್ಟು ಕೆಲಸ ಮಾಡಬೇಕು ಎಂದರು.
    ಬಿಜೆಪಿ 2008 ಮತ್ತು 2018 ರಲ್ಲಿ ಬಿಜೆಪಿ ಪೂರ್ಣ ಬಹುಮತ ಬಂದಿದ್ದರೆ ಕಾರ್ಯಕರ್ತರ ಶ್ರಮಕ್ಕೆ ಜಯ ಎನ್ನಬಹುದಿತ್ತು. ಆದರೆ ಅದು ಪಕ್ಷ ಬಹುಮತಕ್ಕೆ ತರುವಲ್ಲಿ ಎಡವಿದ್ದೇವೆ ಎಂಬರ್ಥವಶಗಿದೆ. ಹಿಂದೆ ನಡೆದ ತಪ್ಪು ಈಗ ಆಗಬಾರದು ಎನ್ನುವುದಕ್ಕೆ ಒಂದು ಗುರಿ ಹಾಕಿಕೊಂಡು ಕೆಲಸ ಮಾಡಬೇಕು. ರಾಷ್ಟçಹಿತದ ಧ್ಯೇಯದೊಂದಿಗೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಬೇಕು ಎಂದರು.
    ಸoಘಟನಾತ್ಮಕವಾಗಿ ಭದ್ರವಾಗಿ ಇರುವ ಪಕ್ಷ ಬಿಜೆಪಿ. ಪ್ರಜಾಪ್ರಭುತ್ವವನ್ನು ನಂಬಿಕೆ ಇಟ್ಟು ಪಾಲಿಸುತ್ತಿರುವ ಪಕ್ಷ. ಅದಕ್ಕಾಗಿಯೇ ಅಭ್ಯರ್ಥಿಗಳ ಆಯ್ಕೆಯನ್ನು ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಂಡು ಮಾಡುತ್ತಿದೆ ಎಂದು ಹೇಳಿದರು.
    ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಪಕ್ಷದ ಅಭ್ಯರ್ಥಿಗಳ ಗೆಲ್ಲುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಯಾರೇ ಅಭ್ಯರ್ಥಿಗಳಾದರೂ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
    ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯ್ಕ, ಬಿಜೆಪಿ ರಾಜ್ಯ ಘಟಕದ ಸದಸ್ಯ ಕೆ.ಜಿ.ನಾಯ್ಕ, ಪ್ರಮುಖರಾದ ಎನ್.ಎಸ್.ಹೆಗಡೆ, ಆರ್.ಡಿ.ಹೆಗಡೆ, ಉಷಾ ಹೆಗಡೆ, ನಾಗರಾಜ ನಾಯಕ ಸೇರಿದಂತೆ ಹಲವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top