• Slide
    Slide
    Slide
    previous arrow
    next arrow
  • ‘ಸೇವೆ ಮಾಡುವುದು ಸ್ವಯಂಸೇವಕರ ಸ್ವಭಾವ‌’: ಮೋಹನ್‌ ಭಾಗವತ್‌

    300x250 AD

    ನವದೆಹಲಿ: ಜೈಪುರದಲ್ಲಿ ನಡೆದ ಸೇವಾ ಸಂಗಮ – 2023 ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ  ಮೋಹನ್‌ ಜಿ ಭಾಗವತ್‌ ಅವರು ಭಾಗಿಯಾದರು.

    ಈ ವೇಳೆ ಮಾತನಾಡಿದ ಅವರಿ, “ಇದು ಮೂರನೆಯ ಸೇವಾ ಸಂಗಮ. ಸೇವೆ ಮಾಡುವುದು ಸ್ವಯಂಸೇವಕರ ಸ್ವಭಾವ‌. ಸೇವಾ ವಿಭಾಗವನ್ನು ಆರಂಭಿಸಿ ಸ್ವಯಂಸೇವಕರಲ್ಲಿ ಸೇವಾ ಭಾವದ ಜಾಗೃತಿ ಮೂಡಿಸಿ ಸೇವಾಕಾರ್ಯವನ್ನು ವ್ಯವಸ್ಥಿತ ಗೊಳಿಸಲಾಗಿದೆ. ಸ್ವಯಂಸೇವಕರು ಸಂಘದ ಆರಂಭದಿಂದಲೂ ಸೇವಾ ಕಾರ್ಯ ಮಾಡುತ್ತಿದ್ದರು. ದೇಶದಲ್ಲಿ ಸೇವೆ ಮಾಡುವವರು ಕೇವಲ ಸಂಘದ ಸ್ವಯಂಸೇವಕರು ಮಾತ್ರ ಅಲ್ಲ. ತಮಿಳುನಾಡಿನಲ್ಲಿ ಕೆಲವು ವರ್ಷಗಳ ಹಿಂದೆ ಹಿಂದು ಸರ್ವೀಸ್ ಫೇರ್ ನಡೆಯಿತು. ಆಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದೂ ಸಂಘಟನೆಗಳು, ಸಂತರು ನಡೆಸುವ ಸೇವಾ ಚಟುವಟಿಕೆಗಳು ಇಡೀ ದೇಶದಲ್ಲಿ ಮಿಶನರಿಗಳು ನಡೆಸುವ ಚಟುವಟಿಕೆಗಳಿಗಿಂತಲೂ ಹೆಚ್ಚು ಎಂಬುದು ಅರಿವಿಗೆ ಬಂತು. ಭಕ್ತಿಯ ಆಂದೋಲನದಿಂದಾಗಿ ಸಮಾಜದಲ್ಲಿ ಸಂವೇದನೆ ಇದೆ. ನಮ್ಮ ಧರ್ಮದ ಅಂಗ ಇದು. ಸೇವೆಯಲ್ಲಿ ಸ್ಪರ್ಧೆ ಇಲ್ಲ.ಆದರೆ ಇಂದು ನಾವು ಸ್ಪರ್ಧೆ ಮತ್ತು ಸ್ವಾರ್ಥದ ಆಧಾರದಲ್ಲಿ ಸಾಗುತ್ತಿದ್ದೇವೆ. ಸೇವೆ ಗುಪ್ತವಾಗಿದ್ದಷ್ಟೂ ಒಳ್ಳೆಯದು. ಸೇವೆ ಮಾಡುವುದರಿಂದ ನಮ್ಮ ತನುಮನ ಶುದ್ಧಿಯಾಗುತ್ತದೆ” ಎಂದರು.

    ಪ್ರಾಣಿಗಳಿಗೂ ಕರುಣೆ, ಸಂವೇದನೆ ಇದೆ. ಆದರೆ ಅದನ್ನು ಕೃತಿಗಿಳಿಸುವ ಕೆಲಸ ಮನುಷ್ಯರಿಂದ ಸಾಧ್ಯ, ಅದನ್ನು ಕೃತಿರೂಪಕ್ಕೆ ಇಳಿಸುವುದು ಕರುಣೆ, ಅದು ಮನುಷ್ಯನ ವಿಶೇಷತೆ. ಕರುಣೆಯ ವೈಶ್ವೀಕರಣ ಆಗಬೇಕು. ದುಃಖದಿಂದ ಕೆಲಸ ಆಗುವುದಿಲ್ಲ. ನನಗೆ ದೊರೆತಿರುವುದು ಬೇರೆಯವರಿಗೆ ನೀಡುವ ಗುಣ ಬೇಕು. ಸೇವೆ ಸತ್ಯದ ಪ್ರತ್ಯಕ್ಷ ಅನುಭೂತಿ. ಒಬ್ಬರು ಇನ್ನೊಬ್ಬರ ಜೊತೆಗಿದ್ದರೆ ಪೂರ್ಣ ಆಗುತ್ತೇವೆ. ನಮ್ಮೆಲ್ಲರಲ್ಲೂ ನಾವೆಲ್ಲರೂ ಒಂದೇ ಎಂಬ ಭಾವ ಇರಬೇಕು. ಇಡೀ ಶರೀರದಲ್ಲಿ ಸಂವೇದನೆ ಎಂಬುದು ಕೆಲಸ ಮಾಡುತ್ತದೆ. ಸಮಾಜದಲ್ಲಿಯೂ ಇದರ ಅಗತ್ಯವಿದೆ. ನಾವು ಸಮಾನರು, ನನ್ನೊಳಗೆ ಸಂಪೂರ್ಣ ಸಮಾಜದ ಸ್ವರೂಪ ಇದೆ ಎಂಬ ಭಾವ ಇದ್ದರೆ ಸಾಮರಸ್ಯಯುಕ್ತ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸೇವಾ ಕಾರ್ಯ ನಾನೂ ಮಾಡಿದೆ ಎಂಬ ಅನುಭೂತಿಯಿಂದ ಆನಂದವಿದೆ. ನಾನೇ ಮಾಡಿದೆ ಎಂದಾಗ ಅಹಂಕಾರ ಬರುತ್ತದೆ ಎಂದರು.

    “ಕೈಲಾಸ್ ಸತ್ಯಾರ್ಥಿ ಅವರು, ನಾವು ಕರುಣೆಯ ವೈಶ್ವೀಕರಣ ಮಾಡಬೇಕಾಗಿದೆ ಎಂದರು. ಧರ್ಮ ದ ನಾಲ್ಕು ಕಾಲುಗಳಲ್ಲಿ ಕರುಣೆ ಒಂದು. ನನಗೆ ದೊರೆತಿರುವುದು ಇತರರಿಗೆ ನೀಡುವುದಕ್ಕಾಗಿ ದೊರೆತಿದೆ. ತೇನ ತ್ಯಕ್ತೇನ ಭುಂಜೀತಾ.. ಈ ಭಾವದಿಂದ ಸೇವೆ ಮಾಡಿದಾಗ ಅದು ಸಾಮಾಜಿಕ ಸಾಮರಸ್ಯ ಕ್ಕೆ ಕಾರಣ ಆಗುತ್ತದೆ. ನಮ್ಮೆಲ್ಲರಲ್ಲೂ ಒಂದೇ ಪ್ರಾಣ ಇದೆ,ಎಂದೆನ್ನಿಸಬೇಕು. ಸಮಾಜದ ಒಂದು ಅಂಗ – ದುರ್ಬಲ,ಹಿಂದಿದೆ ಎಂದಾದರೆ ಅದು ಸ್ವಸ್ಥ ಸಮಾಜ ಆಗಲಾರದು (ಶರೀರದಂತೆ). ಸಂಪೂರ್ಣ ಸಮಾಜದಲ್ಲಿ ನಾನು ನನ್ನನ್ನು ಕಾಣುತ್ತೇನೆ ಎಂಬುದು ಸತ್ಯ.ಎಲ್ಲೆಡೆ ಶ್ರಮಕ್ಕೆ ಸಂಮ್ಮಾನ ಇದೆ.ಸೇವೆ ಸ್ವಸ್ಥ ಸಮಾಜ ರೂಪಿಸುತ್ತದೆ. ಆದರೆ ಸ್ವಸ್ಥ ಮನದ ಅಗತ್ಯವೂ ಇದೆ. ಅಹಂಕಾರ ಬರಬಾರದು” ಎಂದರು.

    300x250 AD

    ನಮ್ಮ ಸಮಾಜದ ಒಂದು ಅಂಗ ಹಿಂದಿದೆ ಅನ್ನುವುದು, ನಮಗೆ ಶೋಭೆ ನೀಡದು. ನಮಗೆ ಸಿಕ್ಕಿರುವುದು ಸೇವಾ ಮಾಡುವ ಅವಕಾಶ. ನಮ್ಮ ಸೇವೆ ಪಡೆಯುವಾತ ಮುಂದೆ ಸೇವೆ ಮಾಡುವಾತ ಆಗಬೇಕು. ಭಾರತೀಯ ಸಮಾಜದಲ್ಲಿ ಬಹಳ ಮಂದಿ ಬಹಳ ವಿಧಧ ಸೇವೆ ಮಾಡುತ್ತಾರೆ. ಸಂಪೂರ್ಣ ವಿಶ್ವ ಕರುಣೆ, ಸಂಬಂಧ, ಕುಟುಂಬದ ಆಧಾರದಲ್ಲಿ ನಡೆಯಬೇಕು. ಈ ದಿಕ್ಕಿನಲ್ಲಿ ಎಲ್ಲಾ ಸೇವಾ ಕಾರ್ಯಗಳನ್ನು ಸಧಿಶ, ಪರಸ್ಪರ ಪೂರಕ ಮಾಡುವುದು.ಆಗ ಅದರ ಪರಿಣಾಮ ಕಾಣಿಸುತ್ತದೆ ಎಂದರು.

    ಕೃಪೆ;http://news13.in

    Share This
    300x250 AD
    300x250 AD
    300x250 AD
    Leaderboard Ad
    Back to top