ನವದೆಹಲಿ: ಮೊದಲ ಬಾರಿಗೆ ಸೇನೆಯ ಆರ್ಟಿಲ್ಲರಿ ರೆಜಿಮೆಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಧಿಕಾರಿಗಳು ನಿಯೋಜಿಸಲ್ಪಡಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿ (OTA) ಯಿಂದ ಹೊರಬಂದ ಬಳಿಕ ಮಹಿಳೆಯರ ನಿಯೋಜನೆ ಕಾರ್ಯ ನಡೆಯಲಿದೆ.
ಮಹಿಳೆಯರಿಗೆ ಹೊವಿಟ್ಜರ್‌ಗಳು ಮತ್ತು ರಾಕೆಟ್ ವ್ಯವಸ್ಥೆಗಳನ್ನು ಬಳಸಲು ಇದೇ ಮೊದಲ ಬಾರಿಗೆ ತರಬೇತಿ ನೀಡಲಾಗುತ್ತಿದೆ. ಮಹಿಳಾ ಅಧಿಕಾರಿಗಳು ಈಗಾಗಲೇ ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ ಮತ್ತು ಭಾರತೀಯ ನೌಕಾಪಡೆಯಲ್ಲಿ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆರ್ಟಿಲ್ಲರಿ ರೆಜಿಮೆಂಟ್‌ಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಸೇರ್ಪಡೆಗೊಳಿಸುವ ಭಾರತೀಯ ಸೇನೆಯ ನಿರ್ಧಾರವನ್ನು ಕೇಂದ್ರವು ಅನುಮೋದಿಸಿದೆ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಮಾರ್ಚ್ 31 ರಂದು ಲೋಕಸಭೆಗೆ ತಿಳಿಸಿದ್ದರು.
ಸೇನೆಯ ಆರ್ಟಿಲ್ಲರಿ ರೆಜಿಮೆಂಟ್‌ನಲ್ಲಿ ಮಹಿಳಾ ಅಧಿಕಾರಿಗಳನ್ನು ಸೇರಿಸುವ ನಿರ್ಧಾರವನ್ನು ಮಾರ್ಚ್ 20 ರಂದು ತೆಗೆದುಕೊಳ್ಳಲಾಗಿದೆ.
ಕೃಪೆ;http://news.13in