• Slide
  Slide
  Slide
  previous arrow
  next arrow
 • ಜನತಾ ದಳ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರ ಹೊಮ್ಮಲಿದೆ: M.B.ಸದಾಶಿವ

  300x250 AD

  ಯಲ್ಲಾಪುರ: ಎಚ್.ಡಿ.ಕುಮಾರಸ್ವಾಮಿ ನೇತ್ರತ್ವದಲ್ಲಿ ಹೊಸ ಶಖೆ ಆರಂಭವಾಗಿದ್ದು, ಈ ಚುನಾವಣೆಯಲ್ಲಿ ನಿಶ್ಚಿತವಾಗಿ ಜನತಾ ದಳ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರ ಹೊಮ್ಮಲಿದೆ. ಬೇರೆ ಪಕ್ಷಗಳ ಹೆಗಲ ಮೇಲೆ ಕೈಯಿಟ್ಟು ಸರ್ಕಾರ ರಚಿಸುವ ಪರಿಸ್ಥಿತಿ ಬರದೇ ಸಂಪೂರ್ಣ ಬಹುಮತದಿಂದ ನಮ್ಮದೇ ಸರ್ಕಾರ ರಚನೆಯಾಗುವುದು ನಿಶ್ಚಿತ ಎಂದು ಜೆಡಿಎಸ್ ರಾಜ್ಯ ವಕ್ತಾರ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಎಂ.ಬಿ.ಸದಾಶಿವ ಹೇಳಿದರು.
  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ಯಾತ್ರೆಯಿಂದ ಅಪಾರ ಜನಬೆಂಬಲ ಜೆಡಿಎಸ್‌ಗೆ ವ್ಯಕ್ತವಾಗುತ್ತಿದೆ. ಅದು ಮತವಾಗಿ ಪರಿವರ್ತಿತವಾಗುವಲ್ಲಿ ಯಾವುದೇ ಸಂಶಯವಿಲ್ಲ. ಈ ನೆಲ ಜಲದ ಅಸ್ಮಿತೆಯನ್ನು ಉಳಿಸಿಕೊಂಡು, ಪ್ರಾದೇಶಿಕ ಹಿನ್ನಲೆಯಲ್ಲಿ ಬಡವರ, ರೈತರ ಪರವಾದ ಸರ್ಕಾರ ರಚಿಸುತ್ತೇವೆ. ಪಕ್ಷದ ಹಳೆಯ ಕಾರ್ಯಕರ್ತರು, ಮತ್ತೆ ಮಂಚೂಣೀಯಲ್ಲಿ ಬರುತ್ತಿದ್ದು ಮಿಷನ್ 123 ಗುರಿ ತಲುಪಿಯೇ ತಲುಪುತ್ತೇವೆ ಎಂದ ಅವರು, ನಮ್ಮ ಸರ್ಕಾರ ಬಂದ ನಂತರದಲ್ಲಿ ರೈತರು ಕೃಷಿಯಲ್ಲಿ ಉನ್ನತಿ ಸಾಧಿಸಲು ನೆರವಾಗುವಂತೆ ರೈತರಿಗೆ 10 ಸಾವಿರ ರೂ. ಆರ್ಥಿಕ ನೆರವು, ಮಹಿಳೆಯರ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮುಂತಾದ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಇದು ರೈತರಿಗೆ ಉಚಿವಾಗಿರದೇ, ಉತ್ಪಾದಕ ಪೂರಕವಾಗಿ ನೀರಾವರಿ, ರಸಗೊಬ್ಬರಕ್ಕೆ ಸಹಾಯಧನವಾಗಿದೆ ಎಂದರು.
  ಪಕ್ಷ ಸಂಘಟನೆಗಾಗಿ ಕುಮಾರಸ್ವಾಮಿ ಅವರು ಏಪ್ರಿಲ್ ಎರಡನೇ ವಾರದಲ್ಲಿ ಜಿಲ್ಲೆಗೆ ಬರಲಿದ್ದು, ಜೊಯಿಡಾ, ದಾಂಡೇಲಿ, ಶಿರಸಿ, ಕುಮಟಾ ಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ಹೇಳಿದರು. ಉಚಿತ ನೆರವುಗಳಿಗೆ ಸಂಪನ್ಮೂಲ ಕ್ರೋಡಿಕರಣ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ರೈತರ ಸಾಲ ಮನ್ನಾಕ್ಕೆ 52 ಸಾವಿರ ಕೊಟಿ ರೂಪಾಯಿ ಮನ್ನಾ ಮಾಡಿ ಯಶಸ್ವಿಯಾದಂತೆ ಇದನ್ನೂ ಮಾಡಲಾಗುವುದು. ಹಣದ ದುರ್ಭಳಕೆ ತಡೆದು, ಬೊಕ್ಕಸಕ್ಕೆ ನಷ್ಟ ಆಗದಂತೆ ಸಂಪನ್ಮೂಲ ಕ್ರೋಡಿಕರಿಸಲು ವಿತ್ತ ಸಚಿವನಾಗಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎಂದರು.
  ಹಳೇ ಮೈಸೂರು ಭಾಗವನ್ನು ಹೊರತು ಪಡಿಸಿದರೆ ಜೆಡಿಎಸ್ ಗೆ ಜನಬೆಂಬಲ ಇಲ್ಲ ಎಂದು ವಿರೊಧಿಗಳು ಆಡುತ್ತಿದ್ದಾರೆ. ಉತ್ತರ ಕರ್ನಾಟಕದ ಸಾಕಷ್ಟು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿದ್ದನ್ನು ಅವರು ಮರೆತಿದ್ದಾರೆ ಎಂದರು. ಜಿಲ್ಲೆಯಲ್ಲಿ ಅಭಿವೃದ್ಧಿ ಮತ್ತು ಮೀಸಲಾತಿಯಲ್ಲಿ ಜನರಿಗೆ ಅನ್ಯಾಯವಾಗಿದೆ. ಈ ಅನ್ಯಾಯ ಸರಿಪಡಿಸಲು ಮುಂದಿನ ಸರ್ಕಾರ ರಚನೆಯಲ್ಲಿ ಜಿಲ್ಲೆಯ ಪಾಲು ಇರಲಿದೆ ಎಂದು ಅವರು ಹೇಳಿದರು.
  ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ಗAಗಣ್ಣ, ಜಿಲ್ಲಾ ಪ್ರಭಾರಿ ಅಧ್ಯಕ್ಷ ಮುನಾಫ್ ಮಿರ್ಜಾನಕರ್, ಪ್ರಮುಖರಾದ ಸದಾಶಿವ ನಾಯ್ಕ, ತುಕಾರಾಮ ಗುಡಕರ್, ಸಯ್ಯದ ಮಜೀದ್, ಅಜರ್ ಶೇಖ. ಇಸಾಕ್ ಗುಡ್ನಾನ್ನವರ್, ಮುತ್ತಣ್ಣ ಸಂಗೂರಮಠ ಮುಂತಾದವರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top