ಕುಮಟಾ: ಕುಮಟಾ ಹೊಸ ಬಸ್ ನಿಲ್ದಾಣದ ಬಳಿ ಗುರುವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ, ಮೀನು ತುಂಬುವ ಮಹೇಂದ್ರ ಕಂಟೇನರ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬಗಳೆಲ್ಲಾ ಡಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕೆ ಉರುಳಿವೆ. ಆ ಗಾಡಿಯು ಮೀನು ತುಂಬುವ ಗಾಡಿಯಾಗಿದ್ದು, ಸ್ಥಳೀಯರು ಗಾಡಿಯ ಒಳಭಾಗವನ್ನು ವೀಕ್ಷೀಸಲು ಹೋದಾಗ ಆ ಗಾಡಿಯಲ್ಲಿ ಸುಮಾರು 1 ಟನ್ ಗೋ ಮಾಂಸವನ್ನು ಐಸ್ ಹಾಕಿ, ಶಿರಸಿ ಕಡೆಯಿಂದ ಭಟ್ಕಳಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಾಹನವು ಕುಮಟಾದೆಂದು ತಿಳಿದು ಬಂದಿದ್ದು, ಪ್ರಕರಣ ಕುಮಟಾದ ಆರಕ್ಷಕ ಠಾಣೆಯಲ್ಲಿ ದಾಖಲಾಗಿದೆ.