Slide
Slide
Slide
previous arrow
next arrow

ರೋಟರಾಕ್ಟ್ ರಾಷ್ಟ್ರೀಯ ಯುವ ವಿನಿಯಮ ಕಾರ್ಯಕ್ರಮ ಸಮಾಪ್ತಿ

300x250 AD

ಭಟ್ಕಳ: ತಾಲೂಕಿನ ಶ್ರೀಗುರು ಸುಧೀಂದ್ರ ಮಹಾವಿದ್ಯಾಲಯದ ಘಟಕವಾದ ಭಟ್ಕಳದ ರೋಟರಾಕ್ಟ್ ಕ್ಲಬ್ ಹಾಗು ಭಟ್ಕಳ ರೋಟರಿ ಕ್ಲಬ್‌ನ ಸಹಭಾಗಿತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು 4 ದಿನಗಳ ಅಂತಾರಾಜ್ಯ ಯುವ ವಿನಿಮಯ ಕಾರ್ಯಕ್ರಮವು ವೈಭವಯುತವಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಪ್ರತಿನಿಧಿ ಅನಿಕೇತ್ ಜಾಧವ್, ಅಂತರರಾಜ್ಯ ಯುವ ವಿನಿಮಯ ಕಾರ್ಯಕ್ರಮವು ಒಂದು ವಿಶಿಷ್ಟ ಪರಿಕಲ್ಪನೆಯಾಗಿದ್ದು ಇದು ವಿವಿಧ ಪ್ರದೇಶಗಳ ಜನರ ಆಚಾರ- ವಿಚಾರ, ಸಂಪ್ರದಾಯ, ಪರಂಪರೆ, ಇತಿಹಾಸದ ಕುರಿತು ತಿಳಿದುಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ ಎಂದರು.

ರೋಟರಿ ಜಿಲ್ಲಾ ಅಂತಾರಾಷ್ಟ್ರೀಯ ಸೇವಾ ನಿರ್ದೇಶಕ ಚೈತನ್ಯ ನೀಲಕಂಠನವರ್, ದೇಶ, ಭಾಷೆ, ಸಂಸ್ಕೃತಿ ಹಾಗೂ ಧರ್ಮಗಳ ನಡುವಿನ ಕಂದಕ ಕಡಿಮೆಯಾಗಿ ವಿಶ್ವಮಾನವತೆಯ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಇಂತಹ ಯೋಜನೆಗಳು ಸಹಕಾರಿ ಎಂದರು.

300x250 AD

ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಪಡಿಯಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳಿಂದ ಆಗಮಿಸಿದ ರೋಟರಾಕ್ಟ್ ಸದಸ್ಯರಿಗೆ ಶುಭ ಹಾರೈಸಿದರು. ರೋಟರಾಕ್ಟ್ ಜಿಲ್ಲಾ ವರದಿ ಕಾರ್ಯದರ್ಶಿ ವೈಷ್ಣವಿ ಬ್ರಿಜೆ, ರೋಟರಿ ಜಿಲ್ಲಾ ಕಾರ್ಯಪಡೆ ಅಧ್ಯಕ್ಷ ಹಿಮಾಂಶು ಪೂರ್ವಾಲ್, ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್, ಪ್ರಾಂಶುಪಾಲ ಪ್ರೊ. ಶ್ರೀನಾಥ್ ಪೈ, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ ಉಪಸ್ಥಿತರಿದ್ದರು.

ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ತೇಜಸ್ವಿನಿ ನಾಯ್ಕ್ ಸ್ವಾಗತಿಸಿದರು, ಯೋಜನಾ ಅಧ್ಯಕ್ಷೆ ದೀಕ್ಷಾ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ರೋಟರಾಕ್ಟ್ ಸದಸ್ಯೆ ರಶ್ಮಿ ಮಹಾಲೆ ಹಾಗೂ ಅನ್ವಿತಾ ಭಟ್ ನಿರೂಪಿಸಿದರು ಮತ್ತು ಕಾರ್ಯದರ್ಶಿ ಪಲ್ಲವಿ ಜೈನ ವಂದಿಸಿದರು. ಕಾರ್ಯಕ್ರಮದಲ್ಲಿ ಗುಜರಾತ್, ಆಂಧ್ರಪ್ರದೇಶ ಹಾಗೂ ತಮಿಳುನಾಡುವಿನಿಂದ ಆಗಮಿಸಿದ ರೋಟರಾಕ್ಟ್ ಪ್ರತಿನಿಧಿಗಳು ಉತ್ತರ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಕಲೆ, ಸಂಸ್ಕೃತಿ, ಇತಿಹಾಸದ ಕುರಿತು ಅಧ್ಯಯನ ಮಾಡಿದರು. 

Share This
300x250 AD
300x250 AD
300x250 AD
Back to top