Slide
Slide
Slide
previous arrow
next arrow

ಶಿವರಾಮ ಗಾಂವಕರ ಆರೋಪ ದುರುದ್ದೇಶಪೂರ್ವಕ: ಲತಾ ನಾಯ್ಕ

300x250 AD

ಅಂಕೋಲಾ: ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ ಅವರು ಸುದ್ದಿಗೋಷ್ಠಿ ನಡೆಸಿ ಡೋಂಗ್ರಿ ಗ್ರಾಮ ಪಂಚಾಯತದ ವಿರುದ್ಧ ಮಾಡಿದ್ದ ಭ್ರಷ್ಟಾಚಾರದ ಆರೋಪ ಸಂಪೂರ್ಣ ದುರುದ್ದೇಶತನದ್ದು ಎಂದು ಡೋಂಗ್ರಿ ಗ್ರಾ.ಪಂ ಅಧ್ಯಕ್ಷೆ ಲತಾ ನಾಯ್ಕ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಮ ಗಾಂವಕರ ಅವರು ಸುಳ್ಳು ಆರೋಪ ಮಾಡುತ್ತಿದ್ದು, ಇಲ್ಲಿಯ ಮುಗ್ಧ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಎಲ್ಲವೂ ಕ್ರಮಬದ್ಧವಾಗಿಯೇ ನಡೆಯುತ್ತಿದೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಎಲ್ಲದಕ್ಕೂ ದಾಖಲೆಗಳಿವೆ ಎಂದರು.

ಡೋಂಗ್ರಿ ಗ್ರಾಪಂ ಉಪಾಧ್ಯಕ್ಷ ವಿನೋದ ಭಟ್ ಮಾತನಾಡಿ, ಪಂಚಾಯತದ ಕೆರೆಗದ್ದೆ ಮತ್ತು ಹುಲಿದೇವರಬೈಲ್ ಗ್ರಾಮದ ಕುಡಿಯುವ ನೀರಿನ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರವಾಗಲಿ ಲೋಪವಾಗಲೀ ನಡೆದಿಲ್ಲ. ನಾವು ಪ್ರತಿಯೊಂದಕ್ಕೂ ದಾಖಲೆ ಸಮೇತ ಸ್ಪಷ್ಠನೆ ನೀಡಲು ಸಿದ್ದರಿದ್ದೇವೆ. ದೂರದ ಕಾರಣ ಮಳೆಗಾಲದ ಮುಂಜಾಗ್ರತೆಗಾಗಿ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಇಡಲಾಗುತ್ತದೆ. ಈಗಾಗಲೇ ಹಲವು ಕಡೆ ಒಡೆದು ಹೋದ ನೀರಿನ ಪೈಪುಗಳನ್ನು ಬದಲಾಯಿಸಲಾಗಿದೆ.

300x250 AD

ಕೆಲವು ಕಡೆ ಹೊಸದಾಗಿ ಪೈಪ್ ಅಳವಡಿಸಲಾಗಿದೆ. ಉಳಿದ ಸಾಮಗ್ರಿಗಳನ್ನು ಪಂಚಾಯತ ಗೋಡೌನಿನಲ್ಲಿ ಕಾಯ್ದಿರಿಸಲಾಗಿದೆ. ಸಾಮಗ್ರಿಗಳ ದಾಸ್ತಾನು ಮತ್ತು ಲಭ್ಯತೆಯ ಆಧರದ ಮೇಲೆ ಕ್ರಿಯಾ ಯೋಜನೆಯನ್ನು ಕೈಗೊಳ್ಳಲಾಗಿದೆ. ಕಾಮಗಾರಿಯ ಪ್ರತಿಯೊಂದು ದಾಖಲೆ ಮತ್ತು ಫೋಟೊಗಳನ್ನು ಸಾರ್ವಜನಿಕರ ಸಮ್ಮುಖದಲ್ಲೇ ತೆಗೆದು ಫೈಲ್ ಮಾಡಲಾಗಿದೆ. ಆದರೂ ಶಿವರಾಮ ಗಾಂವಕರ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಧಂಬರ್ಧ ಮಾಹಿತಿ ಪಡೆದು ಆರೋಪ ಮಾಡುತ್ತಿರುವದು ಸರಿಯಲ್ಲ. ಅವರು ಹಿಂದೆಲ್ಲ ಪಂಚಾಯತದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಆಡಳಿತವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದು ಈಗಿನ ಆಡಳಿತ ಅದಕ್ಕೆ ಅವಕಾಶ ನೀಡುತ್ತಿಲ್ಲ ಎನ್ನುವ ಕಾರಣದಿಂದ ದ್ವೇಷ ಸಾಧಿಸಲು ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ರೇಣುಕಾ ಎಂ ಸಿದ್ಧಿ, ಪ್ರೇಮಾ ರಮೇಶ ಹೆಬ್ಬಾರ, ಮಂಜುಳಾ ರಾಜೇಂದ್ರ ಪೆಡ್ನೇಕರ, ಮಂಜುನಾಥ ಆರ್ ಸಿದ್ದಿ, ಸಂಗೀತಾ ನಾಗೇಶ ಹುಲಸ್ವಾರ, ಗ್ರಾಮಸ್ಥರಾದ ಪ್ರಕಾಶ ಟಿ ನಾಯ್ಕ, ಅರುಣ ಡಿ ನಾಯ್ಕ. ನೀಲಕಂಠ ಎಚ್ ನಾಯ್ಕ, ಶಂಕರ ಆರ್ ನಾಯ್ಕ, ನಾಗರಾಜ ಎನ್ ನಾಯ್ಕ, ಲಂಬೋಧರ ನಾಯ್ಕ, ಕೇಶವ ನಾಯ್ಕ, ದೀಪಕನಾಯ್ಕ, ಅರುಣ ನಾಯ್ಕ, ನಾಗರಾಜ ಡಿ ನಾಯ್ಕ, ಗುರು ನಾಯ್ಕ, ರಾಮಕೃಷ್ಣ, ಗಣೇಶ, ಸೋಮೇಶ್ವರ, ರಮೇಶ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top