• Slide
    Slide
    Slide
    previous arrow
    next arrow
  • ಅಂಕೋಲಾದ ಸಂತೆಯಲ್ಲಿ ಮೊಬೈಲ್ ಕಳ್ಳರ ಹಾವಳಿ

    300x250 AD

    ಅಂಕೋಲಾ: ಪಟ್ಟಣದ ಸಂತೆ ಮಾರ್ಕೆಟಿನಲ್ಲಿ  ಮತ್ತೆ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಂತೆಗೆ ಆಗಮಿಸುವವರಲ್ಲಿ ಆತಂಕ ಉಂಟು ಮಾಡುತ್ತಿದೆ. ಸಂತೆಯಲ್ಲಿ ಒಂದೇ ದಿನ ನಾಲ್ಕು ಮೊಬೈಲ್ ಕಳವಾಗಿರುವ ಕುರಿತು ಪೊಲೀಸ್ ದೂರು ದಾಖಲಾಗಿದೆ.
    ಪಟ್ಟಣದ ರವೀಂದ್ರ ರಾಯ್ಕರ, ಕಿರಣ್ ಶೇಟ್ ಮೊಬೈಲ್ ಕಳೆದುಕೊಂಡವರು. ಇವರು ಸಂತೆಗೆ ತರಕಾರಿ ತರಲು ಹೋದಾಗ ಮೊಬೈಲನ್ನು ಕಳ್ಳ ತನ್ನ ಚಾಣಕ್ಷ ಬುದ್ಧಿಯಿಂದ ಎಗರಿಸಿದ್ದಾನೆ. ಮೊಬೈಲ್ ಕಳೆದುಕೊಂಡವರು ಮನೆಗೆ ಹೋಗಿ ಜೇಬಿನಲ್ಲಿ ಮೊಬೈಲ್ ಇಲ್ಲಾಗಿದ್ದನ್ನು ನೋಡಿ ಮನೆಯವರಿಗೆ ವಿಚಾರಿಸಿದರೂ ಪತ್ತೆ ಆಗದ ಕಾರಣ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿದ್ದಾರೆ. ಇದೇ ತರಹ ಮತ್ತೆ 2 ಪ್ರಕರಣಗಳು ವರದಿಯಾಗಿದೆ. ತಮ್ಮ ದುಬಾರಿ ಮೊಬೈಲ್ ಕಳೆದುಕೊಂಡವರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಬೈಲ್ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top