Slide
Slide
Slide
previous arrow
next arrow

ಮಾಸದ ಮಾತು; ಸ್ವಾರಸ್ಯ ಪೂರ್ಣ ಚರ್ಚೆ

300x250 AD

ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ನೆಮ್ಮದಿ ಕುಟೀರದ ಮಾಸದ ಮಾತು ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಎಂಬಿಎ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಗಾರರು ಆಗಿರುವ ಯುವ ಸಾಹಿತಿ ಆನಂದ್ ಶೀಗೆಹಳ್ಳಿ ಇವರು ಮಹಾಭಾರತದಲ್ಲಿ ಮ್ಯಾನೇಜ್ಮೆಂಟ್ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು. ರಾಮಾಯಣ ಮತ್ತು ಮಹಾಭಾರತದ ಪಾತ್ರಗಳನ್ನು, ವ್ಯಕ್ತಿತ್ವ ಗುಣ ವಿಶೇಷತೆಗಳನ್ನು ಗಣನೆಗೆ ತೆಗೆದುಕೊಂಡು ಅದನ್ನು ಆಡಳಿತದ ಶಿಕ್ಷಣದಲ್ಲಿ ಹೇಗೆ ಅಳವಡಿಸಿಕೊಂಡಿದ್ದಾರೆ ಎಂದು ಹೇಳುತ್ತಾ, ತನ್ಮೂಲಕ ಕಂಪನಿಗಳ ಬೆಳವಣಿಗೆಯಲ್ಲಿ ಗುಣ ವಿಶೇಷತೆಗಳು ವಹಿಸಿರುವ ಮಹತ್ವದ ಪಾತ್ರವನ್ನು ವಿವರಿಸಿದರು.

ರಾಮಾಯಣದಲ್ಲಿ ರಾಮನ ವ್ಯಕ್ತಿತ್ವ, ಆತನ ಕರ್ತವ್ಯ ಬದ್ಧತೆ, ಅವಕಾಶಗಳನ್ನು ಉಪಯೋಗಿಸಿಕೊಂಡು ಸಮಯೋಚಿತವಾಗಿ ಕಾರ್ಯಗತಗೊಳಿಸುವುದು, ನಂಬಿಕೆ, ನಾಯಕತ್ವ, ಎಲ್ಲವೂ ವೃತ್ತಿ- ವ್ಯಕ್ತಿತ್ವ- ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿರುವುದನ್ನು ತುಂಬಾ ಸರಳವಾಗಿ ವಿವರಿಸಿದರು. ಭೀಷ್ಮ, ದುರ್ಯೋಧನರ ಕುರಿತಾಗಿ, ಕೆ.ಎಸ್. ಅಗ್ನಿಹೋತ್ರಿರವರ ಪ್ರಶ್ನೆಗಳಿಗೆ ಆನಂದ ಶಿಗೇಹಳ್ಳಿಯವರು ಸಮರ್ಪಕವಾಗಿ ಉತ್ತರ ನೀಡಿದರು. ಸ್ವಾರಸ್ಯ ಪೂರ್ಣ ಚರ್ಚೆ ಇದಾಗಿತ್ತು.

300x250 AD

ಬಹುಭಾಷಾ ಪರಿಣತರು, ಹಿರಿಯ ಸಾಹಿತಿಗಳು, ಪತ್ರಕರ್ತರು, ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಶಾ.ಮಂ.ಕೃಷ್ಣರಾಯರು ಸಾಹಿತ್ಯ ಮತ್ತು ಸಮಾಜ ಕುರಿತು ಉಪನ್ಯಾಸ ನೀಡಿದರು. 50ರ ದಶಕದ ಸಾಹಿತ್ಯದಿಂದ ಈ ವರೆಗಿನ ಬೆಳವಣಿಗೆಗಳನ್ನು ವಿವರಿಸುತ್ತಾ, 50ರ ದಶಕದಲ್ಲಿ ಅನಕೃರವರ ಸಾಹಿತ್ಯದ ಕುರಿತು ಮಡಿವಂತರಿಂದ ಬಂದ ವಿರೋಧ, ಕಾಲಕ್ರಮೇಣದಲ್ಲಿ ಅವು ಒಪ್ಪಿತವಾಗಿದ್ದರ ಕುರಿತು ಹೇಳಿದರು. ಸಮಾಜದ ಪ್ರತಿಬಿಂಬವೇ ಸಾಹಿತ್ಯ, ಈಗ ಪ್ರಸ್ತುತವಾಗಿರುವುದು. ಕಾಲಾಂತರದಲ್ಲಿ ಅಪ್ರಸ್ತುತವಾಗಬಹುದು. ಒಬ್ಬರಿಗೆ ಶ್ರದ್ಧೆ ಇರುವುದು ಇನ್ನೊಬ್ಬರಿಗೆ ಅಂಧಶ್ರದ್ಧೆ ಆಗಬಹುದು. ಸಾಹಿತ್ಯ ಇರಬಹುದು ಅಥವಾ ಚಲನಚಿತ್ರ ಇರಬಹುದು, ಒಳ್ಳೆಯದು ಕೆಟ್ಟದ್ದರ ಆಯ್ಕೆ ಮತ್ತು ಸ್ವೀಕರಿಸುವಿಕೆ ಓದುವವರ, ನೋಡುವವರ ದೃಷ್ಟಿಕೋನವನ್ನು ಅವಲಂಬಿಸಿದೆ ಎಂದರು. ಸಾಹಿತ್ಯ- ಬರವಣಿಗೆಯಲ್ಲಿ ಹೀಗೆಯೇ ಇರಬೇಕು ಎನ್ನುವ ನಿಬಂಧನೆ ಏನು ಇಲ್ಲ. ಈಗ ಬರೆಯುವವರು ತುಂಬಾ ಸಂಖ್ಯೆಯಲ್ಲಿದ್ದಾರೆ. ಓದುವವರ ಸಂಖ್ಯೆ ಹೆಚ್ಚಬೇಕಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಸಮಿತಿಯ ಸದಸ್ಯ ಜಗದೀಶ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗಣಪತಿ ಭಟ್ ವರ್ಗಾಸರ ಸ್ವಾಗತ- ಪ್ರಾಸ್ತಾವಿಕದೊಂದಿಗೆ, ಅತಿಥಿಗಳ ಕಿರು ಪರಿಚಯವನ್ನು ಮಾಡಿಕೊಟ್ಟರು. ಶೈಲಾ ಮಂಗಳೂರು ಸುಶ್ರಾವ್ಯವಾಗಿ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ವಿ.ಪಿ.ಹೆಗಡೆ ವೈಶಾಲಿ ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ಸಾವಿತ್ರಿ ಶಾಸ್ತ್ರಿ ನಿರೂಪಿಸಿದರು. ಸಮಯದ ಪರಿಮಿತಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಇದಾಗಿತ್ತು.

Share This
300x250 AD
300x250 AD
300x250 AD
Back to top