ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥನಾದ ಅಂಗ ಸಂಸ್ಥೆಯಾದ ಸರ್ವಜ್ಣೇಂದ್ರ ಸರಸ್ವತೀ ಪ್ರತಿಷ್ಠಾನದ ಅಡಿಯಲ್ಲಿ ಬೆಂಗಳೂರು ಸೀಮಾ ಪರಿಷತ್ ಜಂಟಿಯಾಗಿ ಬೆಂಗಳೂರಿನ ಹಮ್ಮಿಕೊಂಡ ಜೀವನ ಶಿಕ್ಷಣ ಅಧ್ಯಯನ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಏ.1 ರಿಂದ 17 ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಸ್ತೋತ್ರ, ಸುಭಾಷಿತ, ಭಜನೆ, ದೇವರ ಪೂಜಾ ಮಂತ್ರ ಕೂಡ ಹೇಳಿಕೊಡಲಾಗುತ್ತಿದೆ.
ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ನಿರ್ದೇಶಕ ಎಸ್.ಎಂ.ಹೆಗಡೆ ಬಣಗಿ ಚಾಲನೆ ನೀಡಿ ಶಿಬಿರಾರ್ಥಿಗಳಿಗೆ ಶುಭಾಶಯ ಕೋರಿ ನಮ್ಮ ಸಂಸ್ಕೃತಿ ಪರಂಪರೆ ತಿಳಿಯಲು ಇಂಥ ಶಿಬಿರ ಸಹಕಾರಿ ಎಂದರು.
ನರಸಿಂಹ ಹೆಗಡೆ ಅರೆಕಟ್ಟು ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಮುಖರಾದ ನರಹರಿ ಹೆಗಡೆ ಮುಳಕಿನಕೊಪ್ಪ, ಬೆಂಗಳೆಯ ಜಗನ್ನಾಥ ಹೇಮಾದ್ರಿ, ಸಂಪನ್ಮೂಲ ವ್ಯಕ್ತಿಗಳಾದ ವಿದ್ವಾಂಸರಾದ ಸುಬ್ರಾಯ ಭಟ್ಟ, ಶ್ರೀಪತಿ ಭಟ್ಟ ಇತರರು ಇದ್ದರು.