Slide
Slide
Slide
previous arrow
next arrow

ಯಕ್ಷ ಕಲಾಸಂಗಮ ವಿನೂತನ ಪ್ರಯತ್ನ: ಮಹಿಳೆಯರಿಗೆ ಚಂಡೆವಾದನ ತರಬೇತಿ

300x250 AD

ಶಿರಸಿ: ಯಕ್ಷಗಾನ ಕ್ಷೇತ್ರ ಈಗ ಪುರುಷ ಪ್ರಧಾನವಾಗಿಲ್ಲ. ಮಾತುಗಾರಿಕೆ, ನೃತ್ಯ, ಭಾಗವತಿಕೆಯಲ್ಲಿ ಮಹಿಳೆಯರೂ ತಾವೇನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಆದರೆ, ಯಕ್ಷಗಾನದ ಪ್ರಧಾನ ಭಾಗವಾದ ಚಂಡೆ ವಾದನದಲ್ಲಿ ಮಹಿಳಾ ಕಲಾವಿದರ ಸಂಖ್ಯೆ ಕಡಿಮೆ. ಈಗ ಈ ಕ್ಷೇತ್ರಕ್ಕೂ ಮಹಿಳೆಯರು ತರಬೇತಿ ಪಡೆದು ಪಳಗತೊಡಗಿದ್ದಾರೆ.

ಇಲ್ಲಿನ ಯಕ್ಷ ಕಲಾ ಸಂಗಮ ಈ ವಿನೂತನ ಯತ್ನವನ್ನು ಆರಂಭಿಸಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ 15 ಕ್ಕೂ ಅಧಿಕ ಯುವತಿಯರು, ಮಹಿಳೆಯರು ಚಂಡೆ ವಾದನದ ಆಸಕ್ತಿ ತೋರುತ್ತಿದ್ದಾರೆ, ಈ ಕಲೆಯ ಒಂದೊAದೇ ಸೂಕ್ಷ್ಮತೆಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯ ಆದರ್ಶ ವನಿತಾ ಸಮಾಜದಲ್ಲಿ ಖ್ಯಾತ ಚಂಡೆ ವಾದಕ ಪ್ರಶಾಂತ ಹೆಗಡೆ ಈ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ.

ಶುಕ್ರವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲರಾದ ಅಹಲ್ಯಾ ಹೆಗಡೆ, ಮಹಿಳೆಗೆ ಕಲಿಯುವ ಅವಕಾಶ ಅತ್ಯಗತ್ಯ. ಯಕ್ಷಗಾನ ಗಂಡು ಕಲೆ ಎಂದ ಮಾತ್ರಕ್ಕೆ ಹೆಂಗಸರಿಗೆ ಕಲಿಯಲು ಸಾಧ್ಯವಿಲ್ಲ ಎಂಬರ್ಥವಲ್ಲ. ಯಕ್ಷಗಾನದಲ್ಲಿ ಹಾಡುಗಾರಿಕೆಯ ಜೊತೆ ಮಾತುಗಾರಿಕೆ ಸಹ ಪೂರಕ. ಪೌರಾಣಿಕ ಕಥೆಗಳು ಯಕ್ಷಗಾನದ ಮೂಲಕ ಮುಂದಿನ ಜನಾಂಗಕ್ಕೆ ಸಾಗಲಿ ಎಂದರು.

300x250 AD

ಸoಯೋಜಕಿ ಯಕ್ಷ ಕಲಾ ಸಂಗಮದ ಸುಮಾ ಹೆಗಡೆ ಗಡಿಗೆಹೊಳೆ ಮಾತನಾಡಿ, ಮಹಿಳೆಯರ ಚಂಡೆ ಕಲಿಕೆ ತರಬೇತಿ ನಮ್ಮ ಕನಸಾಗಿತ್ತು ಎಂದರು. ಕಲಾವಿದರಾದ ಗಜಾನನ ಹೆಗಡೆ ಕೋಡಗದ್ದೆ, ಸುಬ್ರಾಯ ಹೆಗಡೆ ಇತರರಿದ್ದರು.

Share This
300x250 AD
300x250 AD
300x250 AD
Back to top