Slide
Slide
Slide
previous arrow
next arrow

ಸರಣಿ ಅಪಘಾತಕ್ಕೆ ಕಾರಣವಾಗಿದ್ದ ಆರೋಪಿಗಳಿಗೆ ಶಿಕ್ಷೆ

300x250 AD

ಯಲ್ಲಾಪುರ: ಸರಣಿ ಅಪಘಾತದಲ್ಲಿ ಲಾರಿ ಚಾಲಕ ಸಾವನಪ್ಪಿದ ಪ್ರಕರಣಕ್ಕೆ ಸಂಬ0ಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳಿಗೆ 1 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.
2020ರ ಜುಲೈ 2ರಂದು ಜಗದೀಶ ಶಿವಪ್ಪ ಮದ್ನೂರ್ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ದೇಶಪಾಂಡೆ ನಗರದ ಬಳಿ ರಾತ್ರಿ ವೇಳೆ ಯಾವುದೇ ಲೈಟ್ ಅಳವಡಿಸದೇ ಟ್ಯಾಂಕರ್ ನಿಲ್ಲಿಸಿದ್ದು, ಮಿನಿ ಲಾರಿ ಚಲಾಯಿಸಿಕೊಂಡು ಬಂದ ಫಕ್ಕಿರೇಶ ಲಕ್ಷ್ಮಣ ಕೋರವರ ಎಂಬಾತ ಟ್ಯಾಂಕರಿಗೆ ಡಿಕ್ಕಿ ಹೊಡೆದಿದ್ದ. ಈ ನಡುವೆ ಕೃಷ್ಣ ನಾಯ್ಕ ಎಂಬಾತ ಇನ್ನೊಂದು ಲಾರಿ ಚಲಾಯಿಸಿಕೊಂಡು ಬಂದು, ಈ ಎರಡು ವಾಹನಕ್ಕೆ ಗುದ್ದಿದ್ದು, ಪರಿಣಾಮ ಮಿನಿ ಲಾರಿಯ ಚಾಲಕ ಫಕ್ಕಿರೇಶ ಕೋರವರ ಎರಡು ವಾಹನಗಳ ನಡುವೆ ಸಿಲುಕಿ ಸಾವನಪ್ಪಿದ್ದ.
ಆತನ ಜೊತೆಗಿದ್ದ ಶಿವಕುಮಾರ ಲಕ್ಷ್ಮಣ ಭಜಂತ್ರಿ ಎಂಬಾತ ಸಹ ಗಾಯಗೊಂಡಿದ್ದ. ಈ ವೇಳೆ ಆರೋಪಿ ಕೃಷ್ಣ ಉಲ್ಲಾಸ ನಾಯ್ಕ ಲಾರಿ ನಿಲ್ಲಿಸದೇ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಲಕ್ಷಬಾಯಿ ಬಸವನಗೌಡ ಪಾಟೀಲ್ ಅವರು ಎರಡು ವಾಹನದ ಚಾಲಕರಿಗೆ 1 ವರ್ಷ ಜೈಲು, 5 ಸಾವಿರ ರೂ ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲರಾದ ಝಿನಿತ್‌ಬಾನು ಇಬ್ರಾಹಿಂಸಾಬ್ ಶೇಖ್ ಅವರು ವಾದ ಮಂಡಿಸಿದ್ದರು.

300x250 AD
Share This
300x250 AD
300x250 AD
300x250 AD
Back to top