Slide
Slide
Slide
previous arrow
next arrow

ಮಂಜಗುಣಿಯಲ್ಲಿ ಶ್ರದ್ಧೆ ಭಕ್ತಿಯಿಂದ ನಡೆದ ಪಂ. ಮೇವುಂಡಿ ಗಾನ

300x250 AD

ಶಿರಸಿ : ತಾಲೂಕಿನ ಶ್ರೀ ಕ್ಷೇತ್ರ ಮಂಜಗುಣಿಯ ವೆಂಕಟ್ರಮಣ ದೇವಸ್ಥಾನ ಆವಾರದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ನಡೆದ ಅಂತರಾಷ್ಟ್ರೀಯ ಗಾಯನ ಖ್ಯಾತಿಯ ಪಂ. ಜಯತೀರ್ಥ ಮೇವುಂಡಿ ಮತ್ತು ಬಳಗದ ಭಕ್ತಿ ಸಂಗೀತ ಸೇವೆ ಶ್ರದ್ಧಾ, ಭಕ್ತಿಯಿಂದ ನಡೆದು ಭಾವಪರವಶಗೊಳಿಸಿತು.
ಮೊದಲಿಗೆ ಪಂ. ಜಯತೀರ್ಥರು ಶುದ್ಧ ದೈವತ್‌ರಾಗನ್ನು ವಿಸ್ತಾರವಾಗಿ ಹಾಡಿ ನಂತರದಲ್ಲಿ ಭೈರಾಗಿ ಭೈರವ ಪ್ರಸ್ತುತಗೊಳಿಸಿ ತದನಂತರದಲ್ಲಿ ಜನಪ್ರಿಯ ದಾಸರ ಪದಗಳನ್ನು ಅತ್ಯಂತ ಭಕ್ತಿಯಿಂದ ಹಾಡಿದರು. ಇದಕ್ಕೂ ಪೂರ್ವದಲ್ಲಿ ಗಾಯಕಿ ಕು. ವಿಭಾ ಹೆಗಡೆ ಯಲ್ಲಾಪುರ ತನ್ನ ಸಂಗೀತ ಸೇವೆ ನಡೆಸಿಕೊಟ್ಟು ರಾಗ್ ಬಸಂತ ಮುಖಾರಿ ಪ್ರಸ್ತುತಗೊಳಿಸುತ್ತ ಕೆಲವೊಂದು ಭಕ್ತಿ ಗೀತೆಗಳನ್ನು ಹಾಡಿದರೆ ಪಂ. ಮೇವುಂಡಿಯವರ ಪುತ್ರ ಯುವ ಗಾಯಕ ಲಲಿತ್ ಮೇವುಂಡಿ ರಾಗ್ ಅಹಿರ ಭೈರವದಲ್ಲಿ ವಿಸ್ತಾರವಾಗಿ ಹಾಡಿ ನಂತರ ಭಕ್ತಿ ಪ್ರಧಾನ ಹಾಡುಗಳನ್ನು ಪ್ರಸ್ತುತಗೊಳಿಸಿದರು.
ಎಲ್ಲ ಕಲಾವಿದರ ಸಂಗೀತ ಸೇವೆಗೆ ತಬಲಾದಲ್ಲಿ ಗುರುರಾಜ್ ಆಡುಕಳ, ಗಣೇಶ ಗುಂಡ್ಕಲ್, ಹಾಗೂ ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ ಸಾಥ್ ನೀಡಿದರು. ಸಂಗೀತ ಸೇವೆಯಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರಿಗೆ ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ವಿ. ಶ್ರೀನಿವಾಸ ಭಟ್ಟ ಪ್ರಸಾದ ನೀಡಿ ಆಶೀರ್ವದಿಸಿದರು.

300x250 AD
Share This
300x250 AD
300x250 AD
300x250 AD
Back to top