Slide
Slide
Slide
previous arrow
next arrow

ರಾಹುಲ್ ಸಂಸತ್ ಸದಸ್ಯತ್ವ ರದ್ದು; ಕಾಂಗ್ರೆಸ್ ಪ್ರತಿಭಟನೆ

300x250 AD

ಶಿರಸಿ: ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ರದ್ದುಪಡಿಸಿರುವಿಕೆ ಮತ್ತು ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರದ ಮೀಸಲಾತಿ ಬದಲಾವಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿಯ ಬಿಡ್ಕಿಬೈಲಿನ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ 50ಕ್ಕೂ ಅಧಿಕ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಪ್ರಮುಖ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ಪ್ರಜಾಪ್ರಭುತ್ವದ ಕನಸಿನೊಂದಿಗೆ ದೇಶ ಸ್ವಾತಂತತ್ರಗೊOಡಿದೆ. ಆದರೆ, ಈಗಿನ ಸರ್ಕಾರಗಳಿಂದ ಪ್ರಜಾಪ್ರಭುತ್ವದ ಹರಣ ಆಗುತ್ತಿದೆ. ರಾಹುಲ್ ಗಾಂಧಿಯವರ ಕುರಿತಂತೆ ನ್ಯಾಯಾಲಯದ ಆದೇಶಕ್ಕೆ ನಾವು ಗೌರವ ನೀಡುತ್ತೇವೆ. ಆದರೆ, ಬಿಜೆಪಿ ಪಕ್ಷ ರಾಹುಲ್ ಅವರ ಮೇಲೆ ಸದಾ ಕತ್ತಿಮಸೆಯುವ ಕಾರ್ಯ ನಡೆಸಿದೆ. ತ್ವರಿತವಾಗಿ ಅವರ ಸಂಸದ ಸ್ಥಾನ ಕಸಿದುಕೊಳ್ಳುವ ಪ್ರಕ್ರಿಯೆ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.

ನಾಗರಾಜ ನಾರ್ವೇಕರ್ ಮಾತನಾಡಿ, ಹಿಂದುತ್ವದ ಹೆಸರಿನಲ್ಲಿ ಹಿಂದು ಯುವಕರ ದಾರಿ ತಪ್ಪಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ಈ ಹಿಂದೆ ಪರೇಶ ಮೇಸ್ತ ಪ್ರಕರಣವೇ ಇದಕ್ಕೆ ಸಾಕ್ಷಿಯಾಗಿದ್ದು, ಹಿಂದು ಯುವಕರು ಎಚ್ಚರಿಕೆಯಿಂದ ಇರಬೇಕು ಎಂದರು.
ರವೀ0ದ್ರನಾಥ ನಾಯ್ಕ ಮಾತನಾಡಿ, ದೇಶದಲ್ಲಿ ಅಘೋಷಿತ ಎಮರ್ಜನ್ಸಿ ನಿರ್ಮಾಣವಾಗುತ್ತಿದೆ. ಕಾನೂನು ತೀರ್ಪನ್ನು ಏಕಾಏಕಿ ಜಾರಿಗೊಳಿಸುವ ಹಿನ್ನೆಲೆ ಸಂಶಯ ಮೂಡಿಸುತ್ತಿದೆ. ವಸತಿ ನಿಲಯವನ್ನೂ ಖಾಲಿ ಮಾಡುವಂತೆ ಸೂಚಿಸಿರುವುದು ಸೂಕ್ತವಲ್ಲ ಎಂದರು.
ಪ್ರಮುಖರಾದ ಸಿ.ಎಫ್.ನಾಯ್ಕ ಮಾಳಂಜಿ, ರಮೇಶ ದುಭಾಶಿ, ಜ್ಯೋತಿ ಗೌಡ, ಬಸವರಾಜ ದೊಡ್ಮನಿ, ಪ್ರದೀಪ ಶೆಟ್ಟಿ, ಮೋಹಿನಿ ಬೈಲೂರ್, ಸುಮಾ ಉಗ್ರಾಣಕರ್, ಗಾಯತ್ರಿ ನೇತ್ರಕರ್, ಸತೀಶ ನಾಯ್ಕ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top