• Slide
    Slide
    Slide
    previous arrow
    next arrow
  • ಶಿಕ್ಷಕ ನಾರಾಯಣ ಭಾಗ್ವತ್’ಗೆ ರಂಗ ಸಮ್ಮಾನ

    300x250 AD

    ಶಿರಸಿ: ರಾಷ್ಟ್ರ‌ ಮಟ್ಟದಲ್ಲಿ ಅತ್ಯುತ್ತಮ ಮಕ್ಕಳ ರಂಗ‌ ನಿರ್ದೇಶಕ ಪ್ರಶಸ್ತಿ ಪುರಸ್ಕೃತ, ಇಲ್ಲಿನ ಶಿಕ್ಷಕ ನಾರಾಯಣ ಪಿ.ಭಾಗ್ವತ್ ಅವರನ್ನು ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗ ಸನ್ಮಾನ ನೀಡಿ ಗೌರವಿಸಲಾಯಿತು.

    ಕಳೆದ ವರ್ಷ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ನಾರಾಯಣ ಭಾಗ್ವತ್ ಶಿರಸಿ‌ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ ಶಿಕ್ಷಕರಾಗಿ‌ ಸೇವೆ ಸಲ್ಲಿಸುತ್ತಿದ್ದಾರೆ. ಲಾಕ್ ಡೌನ್ ಅವಧಿಯಲ್ಲೂ ತಂತ್ರಜ್ಞಾನ ಬಳಸಿ ಪಾಠ ನಾಟಕಗಳನ್ನೂ ಮಾಡಿದ ನಾರಾಯಣ ಭಾಗ್ವತ್, ಶಿರಸಿ ಮಕ್ಕಳ ವಿಜ್ಞಾನ ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಗೆಲ್ಲಿಸಿದ್ದರು. ಅವರನ್ನು ಶೇಷಗಿರಿಯ ಶ್ರೀಗಜಾನನ ಯುವಕ‌ ಮಂಡಳಿ ಸಮ್ಮಾನಿಸಿ ಅಭಿನಂದಿಸಿ ಸಂಭ್ರಮಿಸಿತು.
    ಇದೇ ವೇಳೆ ಉತ್ತರ ಕರ್ನಾಟಕದ ಪ್ರಸಿದ್ಧ ಕಲಾವಿದರಾದ ಮಹದೇವ ಹಡಪದ,‌ ಬಸವೆಪ್ಪ ಆನವಟ್ಟಿ, ಲತಾ ಪಾಟೀಲರನ್ನೂ ಗೌರವಿಸಲಾಯಿತು.

    300x250 AD

    ಕವಿ ಹಿರಿಯ ರಂಗತಜ್ಞ ಸತೀಶ ಕುಲಕರ್ಣಿ, ರಂಗ ಕರ್ಮಿ ನರಸಿಂಹ ಕೋಮಾರ, .ಶೇಷಗಿರಿ ಕಲಾತಂಡದ ಮುಖ್ಯಸ್ಥ ಪ್ರಭು ಗುರಪ್ಪನವರ ಸಂಚಾಲಕ ನಾಗರಾಜ ಧಾರೇಶ್ವರ ಮತ್ತು ಇತರರು ಉಪಸ್ಥಿತರಿದ್ದರು.
    ನಂತರ ಮಹಾದೇವ ಹಡಪದ ನಿರ್ದೇಶಿಸಿ ನಟಿಸಿದ ಗುಡ್ಡದ ಹಾಡು ನಾಟಕ ಪ್ರದರ್ಶನ ನಡೆಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top